

ಉಡುಪಿ: ಕೆಲಸ ಮುಗಿಸಿ ಕೈಕಾಲು ತೊಳೆಯಲೆಂದು ನದಿಗಿಳಿದ ಮೂವರು ಯುವಕರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಕ್ಯಾಲ್ವಿನ್ ಕ್ಯಾಸ್ತಾಲಿನೊ (21), ಜಾಬೀರ್ (18) ಮತ್ತು ರಿಜ್ವಾನ್ (28) ಮೃತಪಟ್ಟ ಕಾರ್ಮಿಕರು.
ಉಡುಪಿ ಜಿಲ್ಲೆಯ ಶಿರ್ವದ ಪಾಂಬೂರು ಕಬೆಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆಲಸಕ್ಕೆ ತೆರಳಿದ್ದ ಈ ಯುವಕರು ಅಲ್ಲಿಂದ ಮರಳುವಾಗ ಕೈಕಾಲು ತೊಳೆಯಲು ನದಿಗೆ ಇಳಿದಿದ್ದರು. ಆದರೆ ಇವರು ನೀರಿಗಿಳಿದು ಈಜಲು ಹೋದ ಜಾಗದಲ್ಲಿ ಆಳವಾದ ಗುಂಡಿ ಇದ್ದ ಕಾರಣ ಮುಳುಗಿ ಮೃತಪಟ್ಟಿದ್ದಾರೆ.
ಮೃತಪಟ್ಟವರು ಶಂಕರಪುರ ಸುಭಾಷ್ನಗರದ ನಿವಾಸಿಗಳು. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.