ಸಾಹಿತ್ಯ ಮಿತ್ರಕೂಟ ಪ್ರಶಸ್ತಿಗೆ ಮೂರು ಕೃತಿಗಳ ಆಯ್ಕೆ

Published on

ಕೊಳ್ಳೇಗಾಲ: ಪಟ್ಟಣದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಮಾ.9ರಂದು ಸಾಹಿತ್ಯ ಮಿತ್ರಕೂಟ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಸಾಹಿತ್ಯ ಮಿತ್ರಕೂಟ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ.

ಸಾಹಿತ್ಯ ಮಿತ್ರಕೂಟ ವತಿಯಿಂದ 2024-25 ನೇ ಸಾಲಿನ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯನ್ನು ಈಗಾಗಲೇ ನಡೆಸಲಾಗಿದ್ದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕೃತಿಗಳನ್ನು ಸಾಹಿತ್ಯ ವಲಯದ ಪ್ರಾಜ್ಞರಿಂದ ಮೂರು ಹಂತದಲ್ಲಿ ಓದಿಸಿ ಅಂತಿಮವಾಗಿ ಮೂರು ಕೃತಿಗಳನ್ನು ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿಗೆ ಆಯ್ಕೆ ಮಾಡ ಲಾಗಿದೆ.

ಬಳ್ಳಾರಿ ಜಿಲ್ಲೆಯ ಬಂಗಿದೊಡ್ಡ ಮಂಜುನಾಥ ಅವರ ‘ಅರಳು ಮಲ್ಲಿಗೆ’ ಕಾದಂಬರಿಗೆ ಪ್ರಥಮ ಸ್ಥಾನ, ಚಿಕ್ಕಮಗಳೂರಿನ ಜಿಲ್ಲೆಯ ಕಾರ್ತಿಕಾದಿತ್ಯ ಅವರ ’ಪ್ಯಾರಾಸೈಟ್’ ಕಾದಂಬರಿಗೆ ದ್ವಿತೀಯ ಸ್ಥಾನ, ಬೆಂಗಳೂರಿನ ಬಿ.ಎಂ.ಗಿರಿರಾಜ ಅವರ ‘ಕಥೆಗೆ ಸಾವಿಲ್ಲ’ ಕಾದಂಬರಿಗೆ ತೃತೀಯ ಸ್ಥಾನ ದೊರೆತಿದೆ. ವಿಜೇತರಿಗೆ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಮಾ.9ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net