ಚಿಕಿತ್ಸೆ ಲಿಸದೆ ಮೂವರು ಕಾರ್ಮಿಕರ ಸಾವು

Published on

ಬಿಡದಿ: ಕಟ್ಟಡ ಕಾರ್ಮಿಕರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಶೆಡ್​ನಲ್ಲಿ ಸಿಲಿಂಡರ್​ ಸ್ಫೋಟದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮೂರೂ ಕಾರ್ಮಿಕರು ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 7 ಕಾರ್ಮಿಕರೂ ಅಸುನೀಗಿದಂತಾಗಿದೆ.

ಪಶ್ಚಿಮ ಬಂಗಾಳ ಮೂಲದ ಅಸನ್​ ಮಲ್ಲಿಕ್​, ಕಬ್ಜುಲ್​ ಶೇಖ್​, ನೂರ್​ ಜಮಲ್​ ಮೃತರು. ಬೀಮೇನಹಳ್ಳಿಯ ಬಳಿ ಕಟ್ಟಡ ಕಾರ್ಮಿಕರು ನಿರ್ಮಿಸಿಕೊಂಡಿದ್ದ ಶೆಡ್​ನಲ್ಲಿ ಕಳೆದ ಮಂಗಳವಾರ ಗ್ಯಾಸ್​ ಸಿಲಿಂಡರ್​ ಸ್ಪೋಟಗೊಂಡು ಗಂಭೀರ ಗಾಯಗೊಂಡಿದ್ದ 7 ಕಾರ್ಮಿಕರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಶುಕ್ರವಾರ ಚಿಕಿತ್ಸೆ ಫಲಿಸದೆ 4 ಮಂದಿ ಮೃತಪಟ್ಟಿದರು. ಉಳಿದ 3 ಮಂದಿಗೆ ಚಿಕಿತ್ಸೆ ಮುಂದುವರಿದಿತ್ತು, ಸೋಮವಾರ ಅವರು ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net