3 ಬಾರಿ ಹೃದಯಾಘಾತವಾದಾಕೆ ಕರೋನಾ ಸೋಂಕು ಮುಕ್ತೆ

Corona virus
Published on

ಬೆಂಗಳೂರು: ಕೋವಿಡ್ ಸೋಂಕಿನಿಂದ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾಗಿದ್ದ 51 ವರ್ಷದ ಮಹಿಳೆ ಮೂರು ಬಾರಿ ಸಂಭವಿಸಿದ ಹೃದಯಾಘಾತದಿಂದ ಚೇತರಿಸಿಕೊಂಡಿದ್ದಾರೆ.

ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಹಿಳೆ ರಕ್ತ ಹೀನತೆ (ನ್ಯುಮೋನಿಯಾ) ದಿಂದ ಬಳಲುತ್ತಿದ್ದರು, ಅಧಿಕ ಬೊಜ್ಜು, ಅಸ್ತಮಾ ಇನ್ನಿತರ ಅನಾರೋಗ್ಯಗಳಿಂದ ಸ್ಥಿತಿ ತೀವ್ರ ಗಂಭೀರವಾಗಿತ್ತು. ಆದ್ದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ದಾಖಲಾದ ಮೊದಲ ಎರಡು ಗಂಟೆಗಳಲ್ಲಿಯೇ ಅವರಿಗೆ ಮೂರು ಬಾರಿ ಹೃದಯಾಘಾತವಾಗಿ ಬದುಕುಳಿಯುವ ಸಾಧ್ಯತೆ ತೀರಾ ಕ್ಷೀಣಿಸಿತ್ತು. ಕೃತಕ ಉಸಿರಾಟ ಹಾಗೂ ಜೀವರಕ್ಷಕ ಸಾಧನಗಳ ಮೂಲಕ ಚಿಕಿತ್ಸೆ ನೀಡಲಾಯಿತು.

20 ದಿನ ಕೃತಕ ಉಸಿರಾಟದಲ್ಲಿದ್ದ ಮಹಿಳೆ ನಿಧಾನವಾಗಿ ಚೇತರಿಸಿಕೊಂಡಿದ್ದು, ಪುನಶ್ಚೇತನ ಕೇಂದ್ರದಲ್ಲಿ ಆರೈಕೆ ಮಾಡಲಾಯಿತು. ಇದೀಗ ಮಹಿಳೆ ಗುಣಮುಖರಾಗಿದ್ದು, ಮನೆ ಆರೈಕೆಯಲ್ಲಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ವಿಡಿಯೊ ಕರೆ ಮೂಲಕ ಆರೋಗ್ಯ ವಿಚಾರಿಸಲಾಗುತ್ತಿದೆ ಎಂದು ಸಿಎಂಐ ಆಸ್ಪತ್ರೆಯ ಅರಿವಳಿಕೆ ವಿಭಾಗ ಹಿರಿಯ ಸಹಾಯಕ ತಜ್ಞ ಡಾ. ಪ್ರಕಾಶ್ ದೊರೆಸ್ವಾಮಿ ಹೇಳಿದ್ದಾರೆ.

ಜ್ವರ ಕಾಣಿಸಿಕೊಂಡಾಗ ಸಾಮಾನ್ಯ ವೈರಾಣು ಜ್ವರ ಎಂದು ತಿಳಿದಿದ್ದೆವು. ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ವೈದ್ಯರು ಕೋವಿಡ್ ಪರೀಕ್ಷೆಗೆ ಸೂಚಿಸಿದರು ವರದಿ ಬರುವ ಮುನ್ನವೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಸೋಂಕು ದೃಢಪಟ್ಟ ಬಳಿಕ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ವೈದ್ಯರ ಪರಿಶ್ರಮದಿಂದ ಅತ್ತೆ ಚೇತರಿಸಿಕೊಂಡಿದ್ದಾರೆ ಎಂದು ಮಹಿಳೆಯ ಅಳಿಯ ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net