ರಾಮನಗರದಲ್ಲಿ ಮೂರು ಸಾವಿರ ಇ-ಖಾತೆ ವಿತರಣೆ

e-a
Published on

ರಾಮನಗರ: ನಗರಸಭಾ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇದುವರೆವಿಗೂ ಮೂರು ಸಾವಿರಕ್ಕೂ ಹೆಚ್ಚು ಇ & ಖಾತೆ ವಿತರಣೆ ಮಾಡಲಾಗಿದೆ ಎಂದು ನಗರಸಭಾಧ್ಯಕ್ಷ ಕೆ. ಶೇಷಾದ್ರಿ (ಶಶಿ) ತಿಳಿಸಿದರು.

ನಗರಸಭಾ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಗೆ ಇ ಖಾತೆ ವಿತರಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಇನ್ನೂ 17 ಸಾವಿರದಷ್ಟು ಇ&ಆಸ್ತಿ ವಿತರಣೆ ಬಾಕಿ ಇದೆ. ಇಂದು ಸುಮಾರು 250 ಇ&ಖಾತೆ ನೀಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ವಿವಿಧ ವಾರ್ಡ್​ಗಳಲ್ಲಿ "ನಿಮ್ಮ ಆಸ್ತಿ&ನಿಮ್ಮ ಹಕ್ಕು ಅಭಿಯಾನದಡಿ ಜನರಿಗೆ ಮತ್ತಷ್ಟು ಸಹಕಾರ ನೀಡಲು ನಗರಸಭೆ ತಯಾರಾಗಿದ್ದು, ಮನೆ ಮನೆ ಬಳಿಗೆ ತೆರಳಿ ಇ&ಆಸ್ತಿ ಸೃಜಿಸಿಕೊಡುವ ಕೆಲಸ ಮಾಡಲಿದೆ ಎಂದರು.

ನಗರಸಭೆ ಅಧಿಕಾರಿಗಳು, ದಾಖಲಾತಿ ಮಾಡಲು ಬೇಕಾಗುವ ಪರಿಕರ ಜತೆ ನಿಗದಿತ ಸ್ಥಳದಲ್ಲಿಯೇ ಇ&ಆಸ್ತಿ ಸೃಜಿಸಿ ಕೊಡುವ ಕೆಲಸ ಮಾಡಲಾಗುತ್ತದೆ.1 ರಿಂದ 9ನೇ ವಾರ್ಡ್​ಗಳಲ್ಲಿ ನಿಮ್ಮ ಆಸ್ತಿ&ನಿಮ್ಮ ಹಕ್ಕು ಅಭಿಯಾನ ಮೂರು ದಿನ ನಡೆಯಲಿದೆ. ವಾರ್ಡ್​ ನಂ.1 ಮತ್ತು 2ಕ್ಕೆ ಸಂಬಂಧಿಸಿದಂತೆ (ಬುಧವಾರ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿಯಾನ ನಡೆಯಲಿದೆ ಎಂದರು.

ಜು.28 ರಂದು 3, 4 ಮತ್ತು 5ನೇ ವಾರ್ಡ್​ಗಳಿಗೆ ಸಂಬಂಧಿಸಿದಂತೆ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷಿ$್ಮನಾರಾಯಣ ದೇವಸ್ಥಾನದ ಆವರಣ, ಹಾಗೂ ಜು.30ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಕನ್ನಿಕಾ ಮಹಲ್​ನಲ್ಲಿ 6,7,8 ಮತ್ತು 9ನೇ ವಾರ್ಡ್​ಗಳ ಆಸ್ತಿಗಳಿಗೆ ಇ&ಆಸ್ತಿ ಸೃಜಿಸುವ ಕೆಲಸ ಮಾಡಲಾಗುತ್ತದೆ. ನಗರದ ಜನರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಜನರು ಇ&ಆಸ್ತಿ ನಮೂನೆ ಎ ಕೋರಿಕೆಗೆ ಕರ್ನಾಟಕ 1 ಕೇಂದ್ರಗಳಲ್ಲಿ ಆನ್​ಲೈನ್​ ಮೂಲಕ ಅರ್ಜಿ ಹಾಕಿದ ಮೇಲೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ಕಡ್ಡಾಯವಾಗಿ ನಗರಸಭೆಗೆ ನೀಡಬೇಕು. ಕಂದಾಯ ಸ್ವೀಕೃತಿಯ ನೋಂದಣಿ ಅಲ್ಲಿ ಆಗಿರುವುದಿಲ್ಲ ಕಂದಾಯ ನೋಂದಣಿ ನಗರಸಭೆಯಲ್ಲೇ ಆಗಬೇಕಿರುವ ಕಾರಣ ಜನರು ಈ ವಿಷಯವನ್ನು ಮನಗಾಣಬೇಕು. > ಡಾ. ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net