3 ವಿಶೇಷ ಮೆಮು ರೈಲು ಸಂಚಾರ ರದ್ದು; 8 ರೈಲುಗಳು ಭಾಗಶಃ ರದ್ದು

New Train 010
Published on

ಬೆಂಗಳೂರು: ಬೈಯಪ್ಪನಹಳ್ಳಿ ವೆಸ್ಟ್​ ಕ್ಯಾಬಿನ್​ ಮತ್ತು ಬೈಯಪ್ಪನಹಳ್ಳಿ ಮತ್ತು ಸರ್​ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ವಾರ್ಷಿಕ ಕೇಬಲ್​ ಮೇಗರಿಂಗ್​ ನಿರ್ವಹಣೆ ಕಾಮಗಾರಿ ಆರಂಭವಾಗುವ ಹಿನ್ನೆಲೆ ಬುಧವಾರ (ಮೇ 29) ಮೂರು ಮೆಮು ರೈಲುಗಳು ರದ್ದುಗೊಳ್ಳಲಿದ್ದು, ಎಂಟು ಮೆಮು ರೈಲುಗಳು ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ವೈಟ್​ಫೀಲ್ಡ್​-ಕೆಎಸ್​ಆರ್​ ಬೆಂಗಳೂರು (ಸಂಖ್ಯೆ 01766), ಕೆಎಸ್​ಆರ್​ ಬೆಂಗಳೂರು-ವೈಟ್​ಫೀಲ್ಡ್​ (ಸಂಖ್ಯೆ 06561) ಮತ್ತು ಬಂಗಾರಪೇಟೆ-ಕೆಎಸ್​ಆರ್​ ಬೆಂಗಳೂರು (ಸಂಖ್ಯೆ 01773) ಮೂರು ವಿಶೇಷ ಮೆಮು ರೈಲುಗಳು ಬುಧವಾರ ತಾತ್ಕಾಲಿಕವಾಗಿ ರದ್ದಾಗಲಿದೆ.

ಕೆಎಸ್​ಆರ್​ ಬೆಂಗಳೂರು-ಬಂಗಾರಪೇಟೆ (ಸಂಖ್ಯೆ 06389) ವಿಶೇಷ ಮೆಮು ರೈಲು ಕೆಎಸ್​ಆರ್​ ಬೆಂಗಳೂರು-ವೈಟ್​ ಫೀಲ್ಡ್​ ನಿಲ್ದಾಣಗಳ ನಡುವೆ, ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್​ಮೆಂಟ್​-ಚಿಕ್ಕಬಳ್ಳಾಪುರ ರೈಲು (ಸಂಖ್ಯೆ 06535/06536) ವಿಶೇಷ ಮೆಮು ರೈಲು ಯಲಹಂಕ-ಬೆಂಗಳೂರು ಕಂಟೋನ್​ಮೆಂಟ್​ ನಡುವೆ, ಮಾರಿಕುಪ್ಪಂ-ಕೆಎಸ್​ಆರ್​ ಬೆಂಗಳೂರು-ಮಾರಿಕುಪ್ಪಂ (ಸಂಖ್ಯೆ 01776/01775) ವಿಶೇಷ ಮೆಮು ರೈಲು ಕೃಷ್ಣರಾಜಪುರಂ-ಕೆಎಸ್​ಆರ್​ ಬೆಂಗಳೂರು ನಿಲ್ದಾಣಗಳ ನಡುವೆ, ಮಾರಿಕುಪ್ಪಂ-ಕೃಷ್ಣರಾಜಪುರಂ-ಮಾರಿಕುಪ್ಪಂ (ಸಂಖ್ಯೆ 01793/01794) ವಿಶೇಷ ಮೆಮು ರೈಲು ಬಂಗಾರಪೇಟೆ-ಕೃಷ್ಣರಾಜಪುರಂ ನಡುವೆ, ಕೆಎಸ್​ಆರ್​ ಬೆಂಗಳೂರು-ಕುಪ್ಪಂ (ಸಂಖ್ಯೆ 06529) ವಿಶೇಷ ಮೆಮು ರೈಲು ಕೆಎಸ್​ಆರ್​ ಬೆಂಗಳೂರು-ಕೃಷ್ಣರಾಜಪುರಂ ನಡುವೆ ರದ್ದಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net