ಪಿಸ್ತೂಲ್ ತೋರಿಸಿ ಬೆದರಿಸಿ 1.5 ಲಕ್ಷ ರೂ. ದೋಚಿದ ದುಷ್ಕರ್ಮಿಗಳು..

Pistol
Published on

ಬೆಳಗಾವಿ: ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದವರಿಗೆ ಪಿಸ್ತೂಲ್ ತೋರಿಸಿ, ಬೆದರಿಸಿ 1.5 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿರವುದು ಬೆಳಕಿಗೆ ಬಂದಿದೆ.

ಹೊನಗಾ ಗ್ರಾಮದ ಎನ್‌ಎಚ್ 4ರ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಪ್ರವೀಣ ನಿರಂಜನ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ. ಪ್ರವೀಣ ಪ್ಲಾಸ್ಟಿಕ್ ಕಾರ್ಖಾನೆಯನ್ನು ಹೊಂದಿದ್ದಾರೆ ಮತ್ತು ಅವರ ಕಾರ್ಖಾನೆಯ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಾಗಿದ್ದಾರೆ. ಮೂವರು ದರೋಡೆಕೋರರ ತಂಡವು ಮುಖಕ್ಕೆ ಮಾಸ್ಕ್ ಹಾಕಿಕೊಂಡು ನುಗ್ಗಿದ್ದು, ಇಬ್ಬರು ಪಿಸ್ತೂಲ್, ಕುಡುಗೋಲು ಹಿಡಿದುಕೊಂಡು ಬೆದರಿಸಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಹೇಳಿದ್ದಾರೆ.

ಪ್ರಾಣಭಯದಿಂದ ನಿರಂಜನ್ ಖಜಾನೆ ತೆರೆದು 1.5 ಲಕ್ಷ ರೂ. ನಗದು ಹಣವನ್ನು ದರೋಡೆಕೋರರಿಗೆ ನೀಡಿದ್ದರು. ಹಣ ಪಡೆದು ಮನೆಯಿಂದ ಯಾರಿಗೂ ತೊಂದರೆ ಮಾಡದೆ ಕಳ್ಳರು ಪರಾರಿಯಾಗಿದ್ದಾರೆ. ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net