ಸಮುದ್ರದಲ್ಲಿ ಮುಳುಗಿ ಮೂವರು ಸಾವು

mng
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಗೋಪಾಡಿ ಚರ್ಕಿಕಡು ಬೀಚ್‌ನಲ್ಲಿ ಭಾನುವಾರ ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಬೆಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳಾದ ಗೌತಮ್(19), ಲೋಕೇಶ್(19) ಹಾಗೂ ಆಶೀಶ್(18) ಮೃತರು. ನಿರೂಪ್(19) ಎಂಬಾತನನ್ನು ರಕ್ಷಿಸಲಾಗಿದೆ.

ಬೆಂಗಳೂರಿನ ವಿವಿಧೆಡೆ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಲೋಕೇಶ್, ಆಶೀಶ್, ಗೌತಮ್, ರಾಹುಲ್, ಕುಶಲ್, ಅನೀಶ್, ನಿರೂಪ್, ನಿತಿನ್ ಹಾಗೂ ಅಂಜನ್ ಎಂಬುವರು ಧನುಷ್ ಎಂಬಾತನ ನೇತೃತ್ವದಲ್ಲಿ ಪ್ರವಾಸಿತಾಣಗಳ ವೀಕ್ಷಣೆಗೆಂದು ರೈಲಿನಲ್ಲಿ ಶುಕ್ರವಾರ ಉಡುಪಿಗೆ ಬಂದಿದ್ದರು. ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್ ಮೊದಲಾದೆಡೆ ತಿರುಗಾಡಿ ಬಳಿಕ ಕುಂಭಾಶಿಯ ವಸತಿ ಗೃಹದಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಮೊಬೈಲ್ ಲೋಕೇಶನ್ ನೋಡಿ ಕೊಠಡಿಯಿಂದ ಗೋಪಾಡಿಯ ಚರ್ಕಿಕಡು ಬೀಚ್‌ಗೆ ನಡೆದು ಸಾಗಿದ್ದರು. ಅವರಲ್ಲಿ ಅಂಜನ್ ಸಮುದ್ರಕ್ಕಿಳಿಯದೆ ವಾಪಸಾಗಿದ್ದು, ಉಳಿದ 9 ಮಂದಿ ನೀರಿಗೆ ಇಳಿದಿದ್ದರು. ಅಲ್ಲಿ ಬಲೆ ಬೀಸುತ್ತಿದ್ದ ಕೆಲವರು ನೀರಿಗೆ ಇಳಿಯದಂತೆ ಎಚ್ಚರಿಕೆ ಕೊಟ್ಟರೂ, ನಿರ್ಲಕ್ಷಿಸಿ ಇಳಿದಿದ್ದರು. ಮಧ್ಯಾಹ್ನವರೆಗೂ ಈಜಾಡುತ್ತ ಅಲ್ಲಿದ್ದ ಆಳವಾದ ಪ್ರದೇಶಕ್ಕೆ ತೆರಳಿದ್ದು, ನಾಲ್ವರು ನೀರುಪಾಲಾಗಿದ್ದಾರೆ. ಈ ಪೈಕಿ ನಿರೂಪ್‌ನನ್ನು ಸ್ಥಳೀಯರು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ ಭೇಟಿ ನೀಡಿ ವಾಹಿತಿ ಪಡೆದರು. ಕುಂದಾಪುರ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ, ಪ್ರಭಾರ ವತ್ತ ನಿರೀಕ್ಷಕ ಜಯರಾಮ ಗೌಡ, ಕುಂದಾಪುರ ನಗರ ಠಾಣಾ ಎಸ್‌ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಕುಂದಾಪುರ ಅಗ್ನಿಶಾಮಕದಳ, ಕರಾವಳಿ ಕಾವಲು ಪಡೆ, ಕೆಎನ್‌ಡಿಎಫ್, ಈಶ್ವರ ಮಲ್ಪೆ ತಂಡ, ಗಂಗೊಳ್ಳಿಯ ಮುಳುಗು ತಜ್ಞ ದಿನೇಶ ಖಾರ್ವಿ ಮತ್ತು ತಂಡ ಹಾಗೂ ಜೀವನ ಮಿತ್ರ ತಂಡದ ಸದಸ್ಯರು ಹಾಗೂ ಸ್ಥಳೀಯ ಮೀನುಗಾರರು ಭಾಗವಹಿಸಿದ್ದರು.

ಸಂಜೆವರೆಗೂ ನಡೆದ ಹುಡುಕಾಟ

ಘಟನೆ ಬಗ್ಗೆ ಸವಾಜ ಸೇವಕ ಈಶ್ವರ್ ಮಲ್ಪೆ ಅವರಿಗೆ ಸ್ಥಳೀಯರು ವಾಹಿತಿ ನೀಡಿದ್ದು, ಅವರು ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ಆರಂಭಿಸಿದ್ದರು. ಲೋಕೇಶ್ ಹಾಗೂ ಗೌತಮ್ ಅವರ ಮೃತದೇಹಗಳನ್ನು ತಕ್ಷಣ ಮೇಲೆತ್ತುವಲ್ಲಿ ಸ್ಥಳೀಯರೂ ಅವರಿಗೆ ಸಹಕರಿಸಿದರು. ಸಂಜೆವರೆಗೂ ಹುಡುಕಾಟ ನಡೆದಿದ್ದು, ಸಂಜೆ ಸ್ಥಳೀಯ ಮೀನುಗಾರರಿಗೆ ಅನೀಶ್ ಮತದೇಹ ಸಿಕ್ಕಿತು. ಮತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.

ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಕುಂದಾಪುರ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ, ಪ್ರಭಾರ ವತ್ತ ನಿರೀಕ್ಷಕ ಜಯರಾಮ ಗೌಡ, ಕುಂದಾಪುರ ನಗರ ಠಾಣಾ ಎಸ್‌ಐ ನಂಜಾ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net