

ಪಡುಬಿದ್ರಿ: ಕಟಪಾಡಿ ಅಚ್ಚಡ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪೆರ್ಡೂರಿನ ರಕ್ಷತ್ (21) ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ. ತಮ್ಮ ಮನೆಯವರೊಂದಿಗೆ ಕುಂಜಾರುಗಿರಿ ದೇವಸ್ಥಾನಕ್ಕೆ ತೆರಳಿ ಕಟಪಾಡಿ ಕಡೆಗೆ ವಾಪಸಾಗುತ್ತಿದ್ದ ವೇಳೆ ಕಟಪಾಡಿ ಕಡೆಯಿಂದ ಬಂದ ಲಾರಿಯು ಕಾರಿಗೆ ಡಿಕ್ಕಿ ಹೊಡೆದಿದ್ದು, ಎರಡೂ ಗಾಡಿಗಳು ಪಲ್ಟಿಯಾಗಿದ್ದವು. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ರಕ್ಷತ್‌ಗೆ ಗಂಭೀರ ಗಾಯವಾಗಿದ್ದು, ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬಸ್ಥರು ಹಾಗೂ ಲಾರಿಯೊಳಗಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.