ಸಿಡಿಲು ಬಡಿದು ಮೂವರ ಸಾವು; ಮಳೆ ಅವಾಂತರ ಶುರು...

Thunder bolt
Published on

ಗದಗ: ರಾಜ್ಯಾದ್ಯಂತ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ/ಆರೆಂಜ್​ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ನಿನ್ನೆ ಮುನ್ಸೂಚನೆ ನೀಡಿದಂತೆ ಇಂದು ಮತ್ತೆ ಭಾರಿ ಮಳೆ ಸುರಿಯಲಾರಂಭಿಸಿದ್ದು, ಕೆಲವೆಡೆ ಅವಾಂತರಗಳು ಉಂಟಾಗಿವೆ.

ಅದರಲ್ಲೂ ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಸಾವಿಗೀಡಾಗಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹರಿಪುರ ನಿವಾಸಿ ಮುರುಗೇಶ್ ಹೊಸಮನಿ (44), ಖಾನಪುರ ಗ್ರಾಮದ ನಿವಾಸಿ ಬಾಬು ದೊಡ್ಡಮನಿ (55), ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಿವಾಸಿ ಹನಮಪ್ಪ ಮನ್ನಾಪುರ ಸಾವಿಗೀಡಾದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net