ಬಾವಿಯಲ್ಲಿ ಮುಳುಗಿ ಮೂವರು ಸಾವು

Drowning-in-open-well
ಸಾಂದರ್ಭಿಕ ಚಿತ್ರ
Published on

ಯಲ್ಲಾಪುರ: ಬಾವಿ ಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ  ತಾಲೂಕಿನ ಮಾವಿನಕಟ್ಟಾದಲ್ಲಿ ಗುರುವಾರ ನಡೆದಿದೆ.

ಪಂಪ್ ರಿಪೇರಿಗೆಂದು ಬಾವಿಗಿಳಿದ ಮೂವರು ನೀರಿಗೆ ಇಳಿದಿದ್ದರು.

ಶಿರಸಿಯ ಯಲ್ಲಾಪುರ ನಾಕೆಯ ಗೋವಿಂದ ಸೋಮಯ್ಯ ಪೂಜಾರಿ (60) ಎಂಬವರು ಬಾವಿಯಲ್ಲಿದ್ದ ಪಂಪ್ ರಿಪೇರಿಗೆ ಇಳಿದ ವೇಳೆ ಆಕಸ್ಮಿವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಅವರನ್ನು ರಕ್ಷಿಸಲು ಮಾವಿನಕಟ್ಟಾದ ಗಣೇಶ ರಾಮದಾಸ ಶೇಟ್ (23) ಹಾಗೂ ಸುರೇಶ ನಾಯರ್ (40) ನೀರಗಿಳಿದಿದ್ದು, ಅವರೂ ಮುಳುಗಿ ಮೃತಪಟ್ಟಿದ್ದಾರೆ.

ಸಿಪಿಐ ರಂಗನಾಥ ನೀಲಮ್ಮನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಶವಗಳನ್ನು ಮೇಲಕ್ಕೆತ್ತಲು ಕ್ರಮ ಕೈಗೊಂಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net