ಮೂವರು ಅಂತಾರಾಜ್ಯ ಕಳ್ಳರ ಬಂಧನ

Published on

ಚಿಕ್ಕಬಳ್ಳಾಪುರ: ವಾಹನಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯದ ಮೂವರು ಕಳ್ಳರನ್ನು ಗ್ರಾಮಾಂತರ ಠಾಣೆಯಲ್ಲಿ ಬಂಧಿಸಿದ್ದಾರೆ. ಸಿಂಗನಮಲದ ಜಗಜೀವನರಾಮ (25), ಗಾರ್ಲದಿನ್ನೆ ಸಂಜೀವಪುರಂನ ಸಾಯಿಕುಮಾರ್​ (22), ಅನಂತಪುರದ ಶ್ರೀನಿವಾಸಲು (26) ಬಂಧಿತರು. ಆರೋಪಿಗಳಿಂದ 8 ಬೈಕ್​,1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ತಿರುಪತಿಯ ಸಾಯಿಪ್ರಶಾಂತ್​ ಕುಮಾರ್​ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಮಾಲು ಸಮೇತ ಮೂವರು ಕಳ್ಳರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net