ಆಟೋ ಪಲ್ಟಿಯಾಗಿ ಮೂವರಿಗೆ ಗಾಯ

Published on

ಚಿಂತಾಮಣಿ: ತಾಲೂಕಿನ ಗುಂಡ್ಲಹಳ್ಳಿ ಬಳಿ ಭಾನುವಾರ ನಿಯಂತ್ರಣ ಕಳೆದುಕೊಂಡ ಆಟೋ ಹಳ್ಳಕ್ಕೆ ಬಿದ್ದಿದ್ದರಿಂದ ಚಾಲಕ ಮತ್ತು ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಬೆಂಗಳೂರು ಕುಂದಲಹಳ್ಳಿಯ ಮಮತಾಜ್​(66), ಪುತ್ರ ಯಾರಬ್​ (42) ಹಾಗೂ ಆಟೋ ಚಾಲಕ ಕೃಷ್ಣಪ್ಪ ಗಾಯಗೊಂಡವರು. ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಟ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net