ಚಿಂತಾಮಣಿ: ಚೇಳೂರು ರಸ್ತೆಯ ಬಡಗವಾರಹಳ್ಳಿ ಬಳಿ ಬುಧವಾರ ಬೊಲೆರೋ ಬೈಕ್ಗೆ ಡಿಕ್ಕಿಯಾಗಿ ಬೈಕ್ನಲ್ಲಿದ್ದ 3 ಗಾಯಗೊಂಡಿದ್ದಾರೆ. ರವಣಪ್ಪ(50), ಸುಧಾಮಣಿ (35), ವಿಕ್ರಮ್ (23)ಗಾಯಾಳುಗಳು.ಚಿಲಕಲನೇರಾರ್ಪು ಹೋಬಳಿಯ ತುಳುವನೂರಿನಿಂದ ಬೈಕ್ನಲ್ಲಿ ಚಿಂತಾಮಣಿಗೆ ಬರುತ್ತಿದ್ದ ಬೈಕ್ಗೆ ಬೊಲೆರೋ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಬೊಲೆರೋ ಡಿಕ್ಕಿ ಹೊಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಬಟ್ಲಹಳ್ಳಿ ಆಸ್ಪತ್ರೆಯ ಆಂಬುಲೆನ್ಸ್ನ ಸಿಬ್ಬಂದಿ ಶ್ರೀಕಾಂತ್, ಸುನಿಲ್ ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ರವಣಪ್ಪಗೆ ತೀವ್ರ ಗಾಯವಾಗಿದೆ, ಗಾಯಾಳುಗಳು ನೀಡಿರುವ ಹೇಳಿಕೆಯ ಮೇಲೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.