

ಚಿಕ್ಕಬಳ್ಳಾಪುರ: ಹಣಕಾಸಿನ ವ್ಯವಹಾರ ನಿರ್ವಹಣೆಯ ಮೂರು ಪ್ರಕರಣಗಳಲ್ಲಿ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳಿಗೆ ಅಧ್ಯಕ್ಷ ಎನ್. ಕುವಾರ್ ಮತ್ತು ಸದಸ್ಯ ಎಚ್.ಜನಾರ್ದನ್ ನೇತೃತ್ವದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ಗ್ರಾಹಕರಿಗೆ ನ್ಯಾಯ ಒದಗಿಸಿದೆ.
ಚಿಂತಾಮಣಿಯ ಎಂ.ಎ. ವೆಂಕಟಸ್ವಾಮಿ ಎಂಬುವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು ಪ್ರತಿ ತಿಂಗಳು ಪಿಂಚಣಿ ಹಣ ಜಮೆಯಾಗುತ್ತಿತ್ತು. ಇದರ ನಡುವೆ ಖಾತೆಯಿಂದ ಹಣ ಕಡಿತಗೊಂಡಿರುವುದನ್ನು ಅರಿತ ಗ್ರಾಹಕರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಅದರಂತೆ ಬ್ಯಾಂಕಿನ ನ್ಯೂನ್ಯತೆಯನ್ನು ತಿಳಿದು, 50,900 ರೂ., ಶೇ.6ರ ಬಡ್ಡಿ ಹಣ, ದಾವೆ ವೆಚ್ಚ 5,000 ರೂ. ಹಾಗೂ ಸಂಕಟಕ್ಕಾಗಿ 3,000 ರೂ.ಗಳನ್ನು ಪಾವತಿಸುವಂತೆ ಆಯೋಗ ಸೂಚಿಸಿದೆ.
ಬಜಾಜ್ ೈನಾನ್ಸ್‌ಗೆ ದಂಡ : ಬಜಾಜ್ ೈನಾನ್ಸ್ ಕಂಪನಿಯು ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸಹ ದೂರುದಾರರಿಗೆ ನೀಡಲು ಗ್ರಾಹಕ ಆಯೋಗ ಆದೇಶಿಸಿದೆ. ನಗರದ ಕಂದವಾರ ನಿವಾಸಿ ಕೆ.ಎನ್.ಗಂಗಾಧರ್ ಬಜಾಜ್ ೈನಾನ್ಸ್ ಕಂಪನಿಯಲ್ಲಿ 2,11,300 ರೂ. ಸಾಲ ಪಡೆದುಕೊಂಡಿದ್ದು ಸಾಲ ಮತ್ತು ಬಡ್ಡಿಯನ್ನು 2024ರ ಜುಲೈ 5ರಂದು ಪಾವತಿಸಿದ್ದಾರೆ. ಇದರ ನಡುವೆಯೂ ಕಂಪನಿಯು ಹೆಚ್ಚುವರಿಯಾಗಿ 13,152 ರೂ.ಗಳನ್ನು ಪಡೆದುಕೊಂಡಿದೆ. ಇದರ ವಿಚಾರಣೆ ನಡೆಸಿದ ಆಯೋಗವು ಹೆಚ್ಚುವರಿ ಹಣ, ಪರಿಹಾರ ಹಣ 10,000 ರೂ. ದಾವೆ ವೆಚ್ಚ 8,000 ರೂ. ಪಾವತಿಸಲು ಆದೇಶಿಸಿದೆ. ದೂರುದಾರರ ಪರವಾಗಿ ವಕೀಲ ಎನ್.ರಮೇಶ್ ವಾದ ಮಂಡಿಸಿದ್ದರು.
ಹೆಚ್ಚು ಸಾಲ ವಸೂಲಿಗೆ ದಂಡ
ದೂರುದಾರರಿಗೆ ನಿಗದಿತ ಸಮಯದಲ್ಲಿ ಹೆಚ್ಚುವರಿ ವಾಹನ ಸಾಲ ನೀಡದೇ ಹಣದ ಕಂತುಗಳನ್ನು ಪಾವತಿಸಲು ಒತ್ತಾಯಿಸಿದ ೈನಾನ್ಸ್ ಕಂಪನಿಗೆ ಗ್ರಾಹಕ ಆಯೋಗವು ದಂಡ ವಿಧಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಯ ಎ. ಕಾವ್ಯಾ ಹೆಚ್ಚುವರಿ ವಾಹನ ಸಾಲಕ್ಕಾಗಿ ಹೀರೊ ಫಿನ್‌ಕಾಪ್ ೈನಾನ್ಸ್ ಮತ್ತು ಕುವೈತ್ ಟೆಕ್ನಾಲಜಿ ಸರ್ವೀಸ್ ಕಂಪನಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಕಂಪನಿಯು ಹೆಚ್ಚುವರಿ ವಾಹನ ಸಾಲವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಹೇಳಿ, ಕಂತುಗಳನ್ನು ಪಾವತಿಸುವಂತೆ ಒತ್ತಾಯಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು 15,000 ರೂ. ಮತ್ತು 12,000 ರೂ. ಮತ್ತು ದಾವೆ ವೆಚ್ಚ 8,000 ರೂ. ಮತ್ತು 3,000 ರೂ. ಪಾವತಿಸಲು ಗ್ರಾಹಕ ನ್ಯಾಯಲಯವು ಆದೇಶಿಸಿದೆ. ವಕೀಲ ಎಚ್.ಸಿ. ಪಾಪಿರೆಡ್ಡಿ ದೂರುದಾರರ ಪರವಾಗಿ ವಾದ ಮಂಡಿಸಿದ್ದರು.