Vijayapuraದಲ್ಲಿ ಮೂರು ಕಣ್ಣಿರುವ ಕರು ಜನನ; ಏನಿದು ಅಚ್ಚರಿ ಎಂದ ಜನರು

Vijayapura Calf
Published on

ವಿಜಯಪುರ: ಪ್ರಕೃತಿಯೇ ವಿಸ್ಮಯಗಳ ಆಗರವಾಗಿದ್ದು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ಪ್ರತಿನಿತ್ಯ ನಡೆಯುತ್ತಿರುತ್ತವೆ. ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ನಮ್ಮ ಊಹೆಗೆ ಮೀರಿರುತ್ತವೆ.

ಇದೀಗ ಮತ್ತೊಂದು ವಿಸ್ಮಯಕಾರಿ ಘಟನೆ ರಾಜ್ಯದ ವಿಜಯಪುರ (Vijayapura) ತಾಲ್ಲೂಕಿನ ಬಾಬಾನಗರದ ಸಾವಿತ್ರಿ ಬಸವರಾಜ್​ ನಾಗುರಿ ಎಂಬುವವರ ಮನೆಯಲ್ಲಿ ನಡೆದಿದ್ದು, ಹಸುವೊಂದು 3 ಕಣ್ಣುಗಳನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಮೂರು ಕಣ್ಣು ಇರುವುದನ್ನು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ.

ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಹಿಂದೆ ಕೂಡ ರಾಜ್ಯದ ಕೆಲವೆಡೆ ಮೂರು ಕಣ್ಣು ಇರುವ ಕರು ಜನನವಾಗಿತು, ಇಂತಹ ಅಪರೂಪದ ಕರು ಇದೀಗ ವಿಜಯಪುರ ತಾಲ್ಲೂಕಿನ ಬಾಬಾನಗರದಲ್ಲಿ ನಡೆದಿದೆ. ಮೂರು ಕಣ್ಣು ಇರುವ ಕರು ಜನನದ ವಿಚಾರ ಕೇಳಿ ನೆರೆಹೊರೆಯ ಗ್ರಾಮಸ್ಥರು ಸಾವಿತ್ರಿ ಬಸವರಾಜ್​ ಅವರ ಮನೆಯ ಬಳಿಕ ಜಮಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net