ಕೆಎಸ್‌ಆರ್‌ಟಿಸಿ ಬಸ್‌ಗೆ ಸಿಲುಕಿ ಮೂರು ಶ್ವಾನಗಳು ಸಾವು

Published on

ಮಾಗಡಿ: ಮಾಗಡಿಯಿಂದ ಜಾಲಮಂಗಲ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಭಾನುವಾರ ರಾತ್ರಿ 10.15ರ ಸಮಯದಲ್ಲಿ ಗೆಜ್ಜಗಾರಗುಪ್ಪೆ ಗ್ರಾಮದ ಬಳಿ ತೆರಳುವಾಗ ಬಸ್‌ಗೆ ಅಡ್ಡಬಂದ ಸಾಕು ನಾಯಿ ಮತ್ತು ಎರಡು ಬೀದಿನಾಯಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದು, ತೆರಳುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಮೂರು ನಾಯಿಗಳು ಮೃತಪಟ್ಟಿವೆ. ನಾಯಿ ಮಾಲೀಕ ಮತ್ತು ಸ್ಥಳೀಯರು ಬಸ್ ತಡೆದು ಚಾಲಕ ಲಕ್ಷ್ಮೀನಾರಾಯಣ ಮೇಲೆ ಹಲ್ಲೇ ನಡೆಸಿದ್ದಾರೆ. ಬಸ್‌ನ ಚಾಲಕನ ಮೇಲೆ ಹಲ್ಲೆ ನಡೆಸಿ ನಿಂಧಿಸಿದ್ದಾರೆ. ಈ ಬಗ್ಗೆ ಹಲ್ಲೆ ಮಾಡದಂತೆ ಚಾಲಕ ಬೇಡಾಡಿದರೂ ಹಲ್ಲೆ ನಡೆಸಿದ್ದಾರೆ. ಚಾಲನೆಕನಿಗೆ ಕಿವಿ, ಬೆನ್ನು, ತಲೆ, ಮುಖದ ಭಾಗಕ್ಕೆ ಗಾಯವಾದ ಕಾರಣ ಮಾಗಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಯಿ ಮಾಲೀಕ ಹಾಗೂ ಬಸ್ ಚಾಲಕ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net