ಅನುಪಮಾ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಆಯೋಜಿಸಿದ್ದ 3 ದಿನಗಳ ಕ್ರೀಡಾಕೂಟ ಯಶಸ್ವಿ

Anupama College
Published on

ಬೆಂಗಳೂರು: ಮಹಾಲಕ್ಷ್ಮೀಪುರಂನ ಅನುಪಮಾ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ವತಿಯಿಂದ ಅನುಸ್ಪರ್ಧಾ-2023 ಶೀರ್ಷಿಕೆಯಡಿಯಲ್ಲಿ ಜೂನ್​ 15ರಿಂದ ಮೂರು ದಿನಗಳ ಕಾಲ ಅಂತರ ಕಾಲೇಜು ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.

ಕ್ರೀಡಾಕೂಟವನ್ನು ಅನುಪಮ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಯೋಗೇಶ್​ ಅವರು ಹಾಗೂ ಮುಖ್ಯ ಅತಿಥಿಗಳಾದ ರಾಜ್ಯ ಹಾಗೂ ರಾಷ್ಟ್ರೀಯ ಮಹಿಳಾ ಕಬ್ಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಶ್ರೀಮತಿ ರೂಪ ಬಿ.ಕೆ. ಅವರು ಉದ್ಘಾಟಿಸಿದರು.

ಇಂದಿನ ಯುವ ಪೀಳಿಗೆಗೆ ಕ್ರೀಡೆಗಳ ಮಹತ್ವವನ್ನು ತಿಳಿಸುವುದರ ಜೊತೆಗೆ ಆರೋಗ್ಯಕರ ಕ್ರೀಡಾ ಮನೋಭಾವವನ್ನು ಬೆಳಸುವುದು ಮತ್ತು ಬದುಕಿನ ಒತ್ತಡಗಳನ್ನು ಮೆಟ್ಟಿನಿಲ್ಲಲು ದೇಹ ಮತ್ತು ಮನಸ್ಸುಗಳೆರಡನ್ನು ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಈ ಕ್ರೀಡಾಕೂಟದ ಉದ್ದೇಶವಾಗಿತ್ತು.

ಸದಾಭಿಪ್ರಾಯದೊಂದಿಗೆ ಆರಂಭವಾದ ಈ ಕ್ರೀಡಾಕೂಟಕ್ಕೆ ಒಟ್ಟು 58 ಪದವಿ ಕಾಲೇಜುಗಳಿಂದ 800ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಬ್ಬಡ್ಡಿ, ಖೋಖೋ, ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಪಂದ್ಯಗಳು ಬಹಳ ಯಶಸ್ವಿಯಾಗಿ ನಡೆದವು. ಬಹುಮಾನದ ರೂಪವಾಗಿ ಐವತ್ತು ಸಾವಿರ ರೂಪಾಯಿಗಳ ನಗದು ಹಾಗೂ ಟ್ರೋಫಿಗಳನ್ನು ನೀಡಲಾಯಿತು.

ಬಹುಮಾನ ವಿತರಣ ಕಾರ್ಯಕ್ರಮವನ್ನು ಮಾಜಿ ಮೇಯರ್ ಹರೀಶ್​ರವರು ಹಾಗೂ ನಂಜುಡಯ್ಯ ಅವರು ನೆರವೇರಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲೆಯರಾದ ಶ್ರೀಮತಿ ಡಾ.ಸಿಂಧು ಎನ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕ್ರೀಡಾಕೂಟವು ಬಹಳ ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net