ಬೀಟೆ ನಾಟಾ ಸಾಗಿಸುತ್ತಿದ್ದ ಮೂವರ ಸೆರೆ

21ark3
ಅರಕಲಗೂಡು ತಾಲೂಕಿನ ರಾಮನಾಥಪುರ- ಹಿರೇಹಳ್ಳಿ ಮಾರ್ಗದ ರಸ್ತೆಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Published on

ಅರಕಲಗೂಡು: ತಾಲೂಕಿನ ರಾಮನಾಥಪುರ- ಹಿರೇಹಳ್ಳಿ ಮಾರ್ಗದ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.50 ಲಕ್ಷ ರೂ. ಮೌಲ್ಯದ ಬೀಟೆ ಮರದ ನಾಟಾಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಹಿರೇಹಳ್ಳಿ ಗ್ರಾಮದ ಎಚ್.ಕೆ. ಚಂದ್ರಶೇಖರ್, ಹಲಗನಹಳ್ಳಿ ಗ್ರಾಮದ ಎಚ್.ಆರ್. ಮಂಜುನಾಥ, ಸತ್ಯಗಾಲ ಗ್ರಾಮದ ಎಚ್.ಜೆ. ಚಂದು ಬಂಧಿತರು.

ಅರಣ್ಯ ಇಲಾಖೆ ಕೊಣನೂರು ಶಾಖೆಯ ಕಂಟೆನಹಳ್ಳಿ ಗಸ್ತಿನ ವ್ಯಾಪ್ತಿಯ ಹಿರೇಹಳ್ಳಿ ರಾಮನಾಥಪುರ ರಸ್ತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆರೋಪಿಗಳು 1.060 ಘನ ಮೀಟರ್ ಬೀಟೆ ನಾಟಾಗಳನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರ್‌ಎಫ್‌ಒ ಯಶ್ಮ ಮಾಚಮ್ಮ, ಡಿಆರ್‌ಎಫ್‌ಒ ಗುರುಸ್ವಾಮಿ, ಶಂಕರ್, ನಾಗೇಶ್ ಹಾಗೂ ಗಸ್ತು ಅರಣ್ಯ ಪಾಲಕರಾದ ದೇವೇಂದ್ರ, ಕಲೀಂ ಪಾಷ, ರೋಹಿತ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net