ಗಾಂಜಾ ಸೇವಿಸುತ್ತಿದ್ದ ಮೂವರ ಬಂಧನ

ganja
Published on

ಮೂಲ್ಕಿ: ಪಕ್ಷಿಕೆರೆ ಸಮೀಪದ ಅತ್ತೂರು ಕಾಪಿಕಾಡು ಖಾಲಿಗುಡ್ಡೆ ಜಾಗದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರನ್ನು ಮೂಲ್ಕಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪ್ರಮೋದ್ ಕುಮಾರ್, ಸ್ಟೀವನ್ ವಿ. ಮತ್ತು ಪ್ರಜ್ವಲ್ ಬಂಧಿತರು. ಪೊಲೀಸರು ಗಸ್ತಿನಲ್ಲಿದ್ದಾಗ ಕಾಪಿಕಾಡು ಖಾಲಿಗುಡ್ಡೆಯಲ್ಲಿ ಮೂವರು ಯುವಕರು ಹೊಗೆಬತ್ತಿ ಸೇದುತ್ತಿರುವುದು ಕಂಡುಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೊಗೆಬತ್ತಿಯಲ್ಲಿ ಗಾಂಜಾ ಸೇರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಪ್ರಕರಣ ಮೂಲ್ಕಿ ಠಾಣೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net