

ಕಲಬುರಗಿ : ಮೋಜು ಮಾಡಲು ಸುಲಿಗೆ ಮಾಡುತ್ತಿದ್ದ ಮೂವರನ್ನು ಚೌಕ್ ಠಾಣೆಯ ಪೊಲೀಸರು ಬಂಧಿಸಿ ೨.೦೨ ಲಕ್ಷ ರೂ. ನಗದು ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈಚೆಗೆ ಬೈಕ್ ಮೇಲೆ ಬಂದು ೪ ಲಕ್ಷ ರೂ.ಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.
ಮಹ್ಮದ ಮುಸ್ತಫಾ ಉಮರುಲ್ಲಾ (೨೪), ಗುಲಾಮ ಮುಸ್ತಫಾ ಅಬ್ದುಲ್ ಗಫಾರ್ (೨೧) ಹಾಗೂ ಅಕ್ರಮಅಲಿ ಮದರಶೇಖ (೨೬) ಬಂಧಿತರು.
ಆಳAದ ತಾಲೂಕಿನ ವಿ.ಕೆ.ಸಲಗರ ಗ್ರಾಮದ ದಯಾನಂದ ಮದನಕರ್ ಎಂಬುವರು ನಗರದ ಶಹಾಬಜಾರದ ಗಂಧಿಗುಡಿ ಕಾಲನಿಯಲ್ಲಿರುವ ಸಂಬAಧಿಕರ ಮನೆಯಿಂದ ಹಣ ತೆಗೆದುಕೊಂಡು ಬರುತ್ತಿದ್ದಾಗ ಮೂವರು ಸೇರಿಕೊಂಡು ಬೈಕ್ ಮೇಲೆ ಬಂದು ಹಣವಿದ್ದ ಚೀಲ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸ್ ಆಯುಕ್ತ ಚೇತನ ಆರ್. ಮತ್ತು ಡಿಸಿಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ. ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.