ಮೂರು ಎಕರೆ ಬಾಳೆ ಫಸಲು ಬೆಂಕಿಗಾಹುತಿ

ಮೂರು ಎಕರೆ ಬಾಳೆ ಫಸಲು ಬೆಂಕಿಗಾಹುತಿ
Published on

ಹನೂರು: ತಾಲೂಕಿನ ಮಂಗಲ ಗ್ರಾಮ ಸಮೀಪದ ಹೊರವಲಯದ ಜಮೀನೊಂದರಲ್ಲಿ ಗುರುವಾರ ಬೆಂಕಿ ತಗುಲಿ ಸುಮಾರು ಮೂರು ಎಕರೆಯಷ್ಟು ಬಾಳೆ ಫಸಲು ನಾಶವಾಗಿದೆ.

ಮಹೇಶ್ ಎಂಬುವರ ಜಮೀನಿನಲ್ಲಿ ಬಾಳೆ ಫಸಲನ್ನು ಬೆಳೆದಿದ್ದು, ಒಂದು ಬಾರಿ ಗೊನೆಗಳನ್ನು ಕಟಾವು ಮಾಡಲಾಗಿದ್ದು, ಕೆಲ ಗಿಡಗಳಲ್ಲಿ ಗೊನೆಗಳು ಬಿಟ್ಟಿದ್ದವು. ಬೆಳಗ್ಗೆ 10ರ ವೇಳೆಯಲ್ಲಿ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಮಾಲೀಕರ ಗಮನಕ್ಕೆ ತಂದರು.

ಬೆಂಕಿ ನಂದಿಸಲು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ಬೆಂಕಿ ಜ್ವಾಲೆ ಹೆಚ್ಚಾಗಿ ಸಮೀಪದಲ್ಲಿನ ಪಾಳು ಬಿದ್ದ 3 ಎಕರೆ ಪ್ರದೇಶಕ್ಕೂ ಬೆಂಕಿ ಹರಡಿತು. ಇದರಿಂದ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವುದರ ಮೂಲಕ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net