ಅಂಗನವಾಡಿಗಳಿಂದ ಕೋವಿಡ್ ವ್ಯಾಕ್ಸಿನ್ ವಿತರಣೆಗೆ ಚಿಂತನೆ

19HNL1
Published on

ಹಾನಗಲ್ಲ: 2021ರ ಹೊತ್ತಿಗೆ ಲಭ್ಯವಾಗುವ ಕೋವಿಡ್ ವ್ಯಾಕ್ಸಿನ್ ಅನ್ನು ಜನತೆಗೆ ಅಂಗನವಾಡಿಗಳ ಮೂಲಕ ನೀಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ಪಟ್ಟಣದ ಸದಾಶಿವ ಮಂಗಲ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗುರುವಾರ ಸ್ಮಾರ್ಟ್​ಫೋನ್ ವಿತರಿಸಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಎಲ್ಲ ಇಲಾಖೆಗಳು ಕಾಗದ ರಹಿತಗೊಳಿಸಲು ಎಲ್ಲ ವ್ಯವಸ್ಥೆ ಡಿಜಿಟಲೀಕರಣಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಂಗನವಾಡಿ ಸಿಬ್ಬಂದಿ ಮತ್ತು ಮಕ್ಕಳ ದಾಖಲಾತಿ, ಹಾಜರಾತಿ, ಗರ್ಭಿಣಿಯರು-ಬಾಣಂತಿಯರ ದಾಖಲಾತಿ ಸೇರಿದಂತೆ ಪಡಿತರ ವಿತರಣೆಯನ್ನೂ ಸ್ಮಾರ್ಟ್​ಫೋನ್​ಗಳ ಮೂಲಕ ದಾಖಲೀಕರಣಗೊಳಸಲಾಗುತ್ತಿದೆ ಎಂದರು.

ಸಿಡಿಪಿಒ ಎಚ್.ಸಂತೋಷಕುಮಾರ ಮಾತನಾಡಿ, ತಾಲೂಕಿನ 319 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಸ್ಮಾರ್ಟ್​ಫೋನ್ ವಿತರಿಸಲಾಗುತ್ತಿದೆ. ಈ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. 3 ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದರು. ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಪುರಸಭೆ ಸದಸ್ಯೆ ಹಸೀನಾಬಿ ನಾಯ್ಕನವರ, ಭೂ-ನ್ಯಾಯ ಮಂಡಳಿ ಸದಸ್ಯ ಶಿವಲಿಂಗಪ್ಪ ತಲ್ಲೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಡಾ.ಸುನೀಲ್ ಹಿರೇಮಠ, ರಾಜಣ್ಣ ಪಟ್ಟಣದ, ನಿಂಗಪ್ಪ ಗೊಬ್ಬೇರ, ಇರ್ಷಾದ್ ಮತ್ತೆಖಾನನವರ ಇತರರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ ದಿಕ್ಷೀತ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net