ಈಜಲು ಹೋದವ ನದಿಯಲ್ಲಿ ಮುಳುಗಿ ಸಾವು

27HNL1-Kumar Halagannavar
Published on

ಹಾನಗಲ್ಲ: ಧರ್ಮಾ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಪಟ್ಟಣದ ಚಿದಂಬರನಗರದ ನಿವಾಸಿ ಕುಮಾರ ಹಲಗಣ್ಣನವರ (52) ಮೃತಪಟ್ಟವ. ಗುರುವಾರ ಮಧ್ಯಾಹ್ನ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಶಂಭುಲಿಂಗನ ಪೂಜೆಗೆಂದು ಕುಟುಂಬದ ಸದಸ್ಯರೊಂದಿಗೆ ತೆರಳಿದ್ದ ಕುಮಾರ, ಧರ್ಮಾ ನದಿಯಲ್ಲಿ ಈಜಲು ಹೋದಾಗ ನೀರಲ್ಲಿ ಮುಳುಗಿದ್ದ. ಈತನನ್ನು ಹುಡುಕಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರನ್ನು ಕರೆಸಲಾಗಿತ್ತು. ಗುರುವಾರ ಹಾಗೂ ಶುಕ್ರವಾರವಿಡಿ ಹುಡುಕಿದ್ದರೂ ಆತ ಪತ್ತೆಯಾಗಿರಲಿಲ್ಲ. ಮುಳುಗಿದ್ದ ಜಾಗದ ಸಮೀಪದ ಪೊದೆಯಲ್ಲಿ ಆತನ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net