ನರೇಗಾ ಹೆಸರಿನಲ್ಲಿ ವಂಚಿಸಿದವರಿಗೆ ಶಿಕ್ಷೆಯಾಗಲಿ

19kkr1(6-25 - uginahali samsye mla
Published on

ಕಿಕ್ಕೇರಿ: ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡದೆ ಹಣ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು, ಸಂಬಂಧಪಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಶಾಸಕ ಎಚ್.ಟಿ.ಮಂಜು ಅವರಲ್ಲಿ ಬುಧವಾರ ಮನವಿ ಮಾಡಿದರು.

ಜೇನುಗೂಡು ಮಹೇಶ್ ಮಾತನಾಡಿ, ಗ್ರಾಮದ ಪ್ರವೇಶದ್ವಾರದಿಂದ ಶಾಲೆಯವರೆಗೆ 300 ಗಿಡಗಳನ್ನು 5 ಲಕ್ಷ ರೂ.ವೆಚ್ಚದಲ್ಲಿ ನೆಡಬೇಕಿತ್ತು. ಆದರೆ ಒಂದು ಗಿಡವನ್ನು ನೆಡದೆ ಪರಿಸರ ಪ್ರೇಮಿ ಗ್ರಾಮದ ವೆಂಕಟೇಶ್ ನೆಟ್ಟಿರುವ ಗಿಡವನ್ನೇ ನೆಟ್ಟಿರುವುದಾಗಿ ಸುಳ್ಳು ಮಾಹಿತಿ ನೀಡಿ 2 ಲಕ್ಷ ರೂ. ಬಿಲ್ ಮಾಡಿಕೊಂಡಿದ್ದಾರೆ. ಲಕ್ಷ್ಮೀಪುರ ಗ್ರಾಪಂನಿಂದ 5 ವರ್ಷಗಳ ಅವಧಿಯಲ್ಲಿ ಸಾಕಷ್ಟು ಕಳಪೆ ಕಾಮಗಾರಿಗಳು ನಡೆದಿವೆ. ಎಲ್ಲವನ್ನು ತನಿಖೆ ಮಾಡಿಸಿ ಎಂದರು.

ಗ್ರಾಮಕ್ಕೆ ತೆರಳಲು ಗುಂಡಿ ರಸ್ತೆಯಿಂದ ಯಾವುದೇ ವಾಹನಗಳು ಬರದಂತಾಗಿದೆ. ಮಾದಾಪುರ-ಊಗಿನಹಳ್ಳಿ ಗೇಟ್ ಬಳಿ ಕೋರಿಕೆ ಬಸ್ ನಿಲುಗಡೆ ಮಾಡುವಂತೆ ತಿಳಿಸಿ ಎಂದು ಮನವಿ ಮಾಡಿದರು.

ಶಾಸಕ ಎಚ್.ಟಿ. ಮಂಜು ಮಾತನಾಡಿ, ಪ್ರಗತಿಪಥ ಯೋಜನೆಯಡಿಯಲ್ಲಿ ಗ್ರಾಮದ ರಸ್ತೆ ಮಾಡಿಸಲಾಗುವುದು. ಬಸ್ ನಿಲುಗಡೆಗೆ ಸ್ಥಳಕ್ಕೆ ಕಂಪ್ಯೂಟರ್ ಟಿಕೆಟ್ ನೀಡಲು ಅಧಿಕಾರಿಗಳಿಗೆ ತಿಳಿಸಲಾಗುವುದು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸರ್ಕಾರದಿಂದ ಅನುದಾನದ ಕೊರತೆ ಕಾಡುತ್ತಿದ್ದು ಸಮಗ್ರ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಜೇನುಗೂಡು ಮಹೇಶ್, ಉಮೇಶ್, ಸುರೇಶ್, ಮೋಹನ್, ಸೋಮಸುಂದರ್, ದಿಲೀಪ್, ನಿಂಗೇಗೌಡ, ವೆಂಕಟೇಶ್, ಮಂಟಿ ಮಹೇಶ್‌ಗೌಡ, ಮಂಜೇಗೌಡ, ರವಿ, ಹೇಮಂತ್, ಬಸವರಾಜು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net