ರಾಮಾಯಣದ ಮೂಲಕ ಜಗತ್ತಿನ ಗಮನ ಸೆಳೆದವರು

hbr (1)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹುಟ್ಟಿನಿಂದ ಯಾರೂ ಶ್ರೇಷ್ಠರಾಗಿರುವುದಿಲ್ಲ. ತಾವು ಮಾಡುವ ಕೆಲಸಗಳ ಮೂಲಕ ಶ್ರೇಷ್ಠರಾಗುತ್ತಾರೆ. ಅಂತಹ ಸಾಲಿಗೆ ಸೇರುವವರು ಮಹರ್ಷಿ ವಾಲ್ಮೀಕಿ. ರಾಮಾಯಣದ ಮೂಲಕ ಜಗತ್ತಿನ ಗಮನ ಸೆಳೆದವರು ಎಂದು ಕನ್ನಡ ಉಪನ್ಯಾಸಕ ಮಂಜುನಾಥ್ ಕುಲಾಲ್ ಶಿವಪುರ ಹೇಳಿದರು.

ಹೆಬ್ರಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಾರ್ಕಳ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದೊಂದಿಗೆ ಹೆಬ್ರಿ ಸಮಾಜ ಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಮಾತನಾಡಿ, ರಾಮಾಯಣದ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಏಕ ಪತ್ನಿತ್ವ, ಭ್ರಾತೃತ್ವ, ಪ್ರಜೆಗಳ ಹಿತಾಸಕ್ತಿ, ದುಷ್ಟರ ಸಂಹಾರ ಬಗ್ಗೆ ಉತ್ತಮವಾದ ಜ್ಞಾನವನ್ನು ರಾಮಾಯಣ ತಿಳಿಸುತ್ತದೆ ಎಂದರು.

ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ್ ಎಸ್.ಬಂಗೇರ ಉದ್ಘಾಟಿಸಿದರು. ಶೈಕ್ಷಣಿಕ ಸಾಧಕರಾದ ಪ್ರತಿಕ್ಷಾ, ನಂದಿನಿ, ವಿಸ್ಮಿತಾ ಬಿ., ಚೈತ್ರಾ ಎಸ್.ನಾಯ್ಕ, ರಂಜಿತಾ, ಸುದೀಕ್ಷಾ ನಾಯ್ಕ, ಸುಶ್ಮಿತಾ, ಅಸ್ಮಿತಾ, ಅನನ್ಯಾ, ಯಮುನಾ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್, ಎಎಸ್‌ಐ ಪ್ರೀತಂಕುಮಾರ್, ಸಮಾಜ ಕಲ್ಯಾಣ ಇಲಾಖೆಯ ನಾಗಶ್ರೀ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net