5 ಎಕರೆಯೊಳಗಿನವರನ್ನು ಸಣ್ಣ ರೈತರೆಂದು ಪರಿಗಣಿಸಿ

Farmers gear up for Monsoon farming
Published on

ಪುತ್ತೂರು ಗ್ರಾಮಾಂತರ: ಐದು ಎಕರೆಗಿಂತ ಕಡಿಮೆ ಜಾಗವಿರುವ ರೈತರನ್ನು ಸಣ್ಣ ರೈತ ಎಂದು ಪರಿಗಣಿಸಿ, ಅವರಿಗೆ ಸಣ್ಣ ರೈತ ದೃಢೀಕರಣ ಪತ್ರ ನೀಡಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಕೆದಂಬಾಡಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಯಲ್ಲಿ ವ್ಯಕ್ತವಾಯಿತು.

ಕೆದಂಬಾಡಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಕೆದಂಬಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಬರ್ಮಣ್ಣ ಗೌಡ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು 5 ಎಕರೆಗಿಂತ ಕಡಿಮೆ ಜಾಗವಿರುವ ರೈತರನ್ನು ಸಣ್ಣ ರೈತ ಎಂದು ಪರಿಗಣಿಸಿ ಯೋಜನೆಯ ಅವಕಾಶ ಒದಗಿಸಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಐಇಸಿ ಸಂಯೋಜಕ ಭರತ್‌ರಾಜ್ ಹಾಗೂ ತಾಲೂಕು ಕಾರ್ಯಕ್ರಮ ಸಂಯೋಜಕಿ ಸೌಮ್ಯ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಬೀಡು, ಸದಸ್ಯರಾದ ರತನ್ ರೈ ಕುಂಬ್ರ, ವಿಠಲ ರೈ ಮಿತ್ತೋಡಿ, ಸುಜಾತ ರೈ, ಅಸ್ಮಾ ಗಟ್ಟಮನೆ, ರೇವತಿ ಉಪಸ್ಥಿತರಿದ್ದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ.ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net