

ಕುಂಬಳೆ: ಯೋಗಾಸನ ಭಾರತ ಆಯೋಜಿಸುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಯೋಗಪಟುಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಯೋಗಾಸನ ಕಾಸರಗೋಡು ನೇತೃತ್ವದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಯನ್ನು ಕಾಸರಗೋಡಿನಲ್ಲಿರುವ ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ಆಗಸ್ಟ್ 18ರಂದು ಆಯೋಜಿಸಲಾಗುತ್ತಿದೆ.
10 ವಷರ್ದಿಂದ ಮೇಲ್ಪಟ್ಟ ಹಾಗೂ 55 ವರ್ಷದವರೆಗಿನ ಯೋಗಪಟುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನಗಳಿಸುವ ಸ್ಪರ್ಧಾಳುಗಳಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು. ಟ್ರೆಡಿಶನಲ್ ಯೋಗಾಸನ, ಆರ್ಟಿಸ್ಟಿಕ್ ಸಿಂಗಲ್, ಆರ್ಟಿಸ್ಟಿಕ್ ಪೇರ್, ಆರ್ಟಿಸ್ಟಿಕ್ ಗ್ರೂಪ್ ಮತ್ತು ರಿದಮಿಕ್ ಪೇರ್ ಎಂಬ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9995541436 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.