ಹೂಲಿ ಶೇಖರ್‌ಗೆ ತೊ.ನಂಜುಂಡಸ್ವಾಮಿ ಪ್ರಶಸ್ತಿ

Huli Sheakar
Published on

ಬೆಂಗಳೂರು: ತೊ. ನಂಜುಂಡಸ್ವಾಮಿ ಗೆಳೆಯರ ಬಳಗವು ಪ್ರಸಕ್ತ ಸಾಲಿಗೆ ನೀಡಲಿರುವ ‘ತೊ.ನಂಜುಂಡಸ್ವಾಮಿ ನೆನಪಿನ ಗೌರವ ಪ್ರಶಸ್ತಿ’ಗೆ ಹಿರಿಯ ನಾಟಕಕಾರ ಮತ್ತು ಸಂಭಾಷಣೆಕಾರ ಉತ್ತರ ಕನ್ನಡ ಜಿಲ್ಲೆಯ ಹೂಲಿ ಶೇಖರ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 10 ಸಾವಿರ ರೂ. ನಗದು, ತಾಮ್ರದ ಲಕ ಹಾಗೂ ವಿಶೇಷ ಕೌದಿ ಹೊದಿಕೆ ಒಳಗೊಂಡಿದೆ. ರಂಗಭೂಮಿಯ ನಾಟಕಕಾರ, ರಂಗ ಸಂಘಟಕ ತೊಟ್ಟವಾಡಿ ನಂಜುಂಡಸ್ವಾಮಿ ಅವರ ಅಭಿಮಾನಿ ಬಳಗವು ಕಳೆದ ಎರಡು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ. 10ರಂದು ಸಂಜೆ 5.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಬಳಗದ ಸಂಚಾಲಕ ಗುಂಡಣ್ಣ ಚಿಕ್ಕಮಗಳೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net