

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇವಳದಲ್ಲಿ ಮೂರನೇ ಮಖೆಜಾತ್ರೆಯಾದ ಹುಣ್ಣಿಮೆ ಮಖೆ ಜಾತ್ರೆ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಾಣ್ಣಾಯ ಉಪಸ್ಥಿತಿಯಲ್ಲಿ ಜರುಗಿತು.
ಹುಣ್ಣಿಮೆ ಮಖೆ ಜಾತ್ರೆ ಪ್ರಯುಕ್ತ, ಗುರುವಾರ ರಾತ್ರಿ ಬಲಿ ಹೊರಟು ಉತ್ಸವವಾಗಿ ರಥಬೀದಿಯಲ್ಲಿ ಭವ್ಯ ರಥೋತ್ಸವ ನಡೆಯಿತು. ಈ ಬಾರಿ ವಿಶೇಷವಾಗಿ ನಡೆದ ಬ್ರಹ್ಮರಥ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು. ವಿಶ್ವಹಿಂದು ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್ ನೇತೃತ್ವದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆದು ಜನಮೆಚ್ಚುಗೆ ಗಳಿಸಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ಸದಸ್ಯರಾದ ಅರ್ತಿಲ ಕೃಷ್ಣರಾವ್, ಜಿ.ಬಿ.ಗೋಪಾಲಕೃಷ್ಣ ರೈ, ಬಿ.ದೇವಿದಾಸ್ ರೈ, ಎಂ.ವೆಂಕಪ್ಪ ಪೂಜಾರಿ, ಅನಿತಾ ಕೇಶವ ಗೌಡ, ಸೋಮನಾಥ, ಪ್ರಧಾನ ಅರ್ಚಕ ಕೆ.ಹರೀಶ ಉಪಾಧ್ಯಾಯ, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸಚಿನ್, ನಿತೇಶ್ ಗಾಣಿಗ, ತಿಮ್ಮಪ್ಪ ಗೌಡ, ಕೈಲಾರ್ ರಾಜಗೋಪಾಲ ಭಟ್, ಪ್ರತಾಪ್ ಪೆರಿಯಡ್ಕ, ಕರಾಯ ರಾಘವೇಂದ್ರ ನಾಯಕ್, ರಾಮಚಂದ್ರ ಮಣಿಯಾಣಿ, ಸದಾನಂದ ನೆಕ್ಕಿಲಾಡಿ, ಪ್ರಶಾಂತ್ ಎನ್, ಸುಧಾಕರ ಶೆಟ್ಟಿ, ಸುರೇಶ್ ಅತ್ರಮಜಲು, ಧನಂಜಯ , ಜಯವಿಕ್ರಂ ಕಲ್ಲಾಪು, ಶ್ರೀನಿಧಿ ಉಪಾಧ್ಯಾಯ, ಯು.ರಾಮ, ಎನ್.ಪ್ರಭಾತ್ ಪೈ, ಸುಜೀರ್ ಗಣಪತಿ ನಾಯಕ್, ವೈ.ಅನಂತ ಶೆಣೈ, ಕರಾಯ ಗಿರೀಶ ನಾಯಕ್, ಕೇಪುಳು ರಾಜೇಶ್ ನಾಯಕ್, ಹರಿರಾಮಚಂದ್ರ, ಸುನೀಲ್ ಅನಾವು, ರಾಜೇಶ ಪೈ, ಎನ್.ಗೋಪಾಲ ಹೆಗ್ಡೆ, ನಾರಾಯಣ ಹೇರಳೆ, ನರಸಿಂಹ ಪಡಿಯಾರ್, ರವೀಂದ್ರ ಪೈ, ವ್ಯವಸ್ಥಾಪಕ ವೆಂಕಟೇಶ ರಾವ್, ಗುಮಾಸ್ತ ಬಡಿಲ ಕೃಷ್ಣ ಪ್ರಸಾದ್, ದಿವಾಕರ ಗೌಡ, ಪದ್ಮನಾಭ ಕುಲಾಲ್, ಕೆ.ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಭಕ್ತರಿಂದ ಮಖೆ ತೀರ್ಥಸ್ನಾನ
ಶುಕ್ರವಾರ ಪ್ರಾತಃಕಾಲದಿಂದಲೇ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಮಖೆ ತೀರ್ಥ ಸ್ನಾನದಲ್ಲಿ ಭಕ್ತರು ಭಾಗಿಯಾದರು. ಬಳಿಕ ದೇವಳದಲ್ಲಿ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿ ಅಕ್ಕಿ ಕೊಡುವ ಮೂಲಕ ಮಹಾಪೂಜೆ ಅನ್ನಪ್ರಸಾದ ವಿತರಣೆ ನಡೆಯಿತು.