ಎಚ್.ಡಿ.ಕೋಟೆಯಲ್ಲಿ ಬುದ್ಧನ ಪತ್ರಿಮೆ ಸ್ಥಾಪನೆಗೆ ಚಿಂತನೆ

24HDK 01
Published on

ಎಚ್.ಡಿ.ಕೋಟೆ: ಜಗತ್ತಿನಲ್ಲಿ ಎತ್ತರವಾದ 888 ಅಡಿ ಎತ್ತರದ ಬುದ್ಧನ ಮೂರ್ತಿಯನ್ನು ತಾಲೂಕಿನಲ್ಲಿ ಸ್ಥಾಪಿಸಲು ಬೌದ್ಧ ಸಂಘಟನೆ ಚಿಂತನೆ ನಡೆಸಿದೆ ಎಂದು ನಳಂದ ಬೌದ್ಧ ವಿಶ್ವವಿದ್ಯಾಲಯದ ಭೋದಿದತ್ತ ಭಂತೇಜಿ ತಿಳಿಸಿದರು.


ತಾಲೂಕಿನ ಅಂತರಸಂತೆ ಬೌದ್ಧ ವಿಹಾರದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಉಪಾಸಕ ಮತ್ತು ಉಪಾಸಕಿಯರ ಧಾರ್ಮಿಕ ಸಂಘ ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾವು ಇಂದು ಜಾತಿಗಳ ಹೆಸರಲ್ಲಿ ಹೊಡೆದು ಹಂಚಿ ಹರಿದು ಹೋಗಿದ್ದೆವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಭಿಕ್ಕು ಸಂಘವು ಪ್ರಪಂಚದ ಎಲ್ಲ ದೇಶದ ಬೌದ್ಧ ವಿಹಾರದ ಮುಖ್ಯಸ್ಥರನ್ನು ಸಂಪರ್ಕ ಮಾಡಿ ಅವರೊಂದಿಗೆ ಸಮನ್ವಯ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದ ಉಪಾಸಕ, ಉಪಾಸಕಿಯರ ಧಾರ್ಮಿಕ ಸಂಘಟನೆ ಕಟ್ಟುಲುು ತೀರ್ಮಾನ ಮಾಡಲಾಗಿದೆ. ಅದರಂತೆ ದೇಶದ ತಳ ಸಮುದಾಯದ ಪ್ರತಿ ಮನೆಯವರೂ ಉಪಾಸಕ, ಉಪಾಸಕಿ ಎಂದು ಸದಸ್ಯತ್ವ ಪಡೆಯುವುದು, ಪ್ರತಿ ಸದಸ್ಯರೂ ಮಾಸಿಕ 100 ರೂ. ವಂತಿಕೆ ನೀಡುವುದು, ಈ ವಂತಿಕೆಯನ್ನು ಬೌದ್ಧ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ತಾಂತ್ರಿಕ ವೈಜ್ಞಾನಿಕ ಸೇವೆಗಳಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದರು.


ಸಮುದಾಯದ ಮುಖ್ಯಸ್ಥರ ಮಾಲೀಕತ್ವದಲ್ಲಿ ಟಿವಿ, ದಿನ ಪತ್ರಿಕೆ, ಮಾಸ ಪತ್ರಿಕೆ, ಮ್ಯಾಗಜೀನ್‌ಗಳನ್ನು ಹೊರತರುವುದು ಮತ್ತು ಶೈಕ್ಷಣಿಕ, ಆರೋಗ್ಯ, ಅನ್ನದಾನ ಸೇವೆಗಳನ್ನು ಮಾಡಿಸುವುದು. ಅಂತಾರಾಷ್ಟ್ರೀಯ ಧಾರ್ಮಿಕ ಸಂಘಟನೆಯನ್ನು ಎಚ್.ಡಿ.ಕೋಟೆ ಯಿಂದ ಆರಂಭಿಸಿ ಜಗತ್ತಿನಾದ್ಯಂತ ವಿಸ್ತರಿಸುವುದು ಸೇರಿದಂತೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.

ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಮುಖಂಡರಾದ ಸರಗೂರು ಶಿವಣ್ಣ, ಹೈರಿಗೆ ಶಿವರಾಜ್, ಸೋಗಳ್ಳಿ ಶಿವಣ್ಣ, ಎಂ.ಡಿ.ಮಂಚಯ್ಯ, ಜೀವಿಕ ಉಮೇಶ್, ವೆಂಕಟಸ್ವಾಮಿ, ಜೀವಿಕ ಬಸವರಾಜ್, ಬಸವರಾಜ್, ಮಲ್ಲೇಶ್, ಸೋಮೇಶ್, ಚಾ.ನಂಜುಂಡ ಮೂರ್ತಿ, ಚಲುವರಾಜ್, ಮುದ್ದುಮಲ್ಲಯ್ಯ, ರಾಜಣ್ಣ, ಪ್ರಕಾಶ್, ನಾಗರಾಜ್, ಗೋವಿಂದರಾಜ್, ನಾಗಣ್ಣ, ಪುರುಷೋತ್ತಮ್, ಮಹದೇವಸ್ವಾಮಿ, ಶಿವಲಿಂಗ, ಕಾಡುಮನೆ ಪ್ರಸನ್ನ, ಸಿದ್ದರಾಜು, ದಿನೇಶ್, ರವೀಂದ್ರ, ಚಂದ್ರಶೇಖರ, ಮಾಸ್ತಯ್ಯ, ಸುರೇಂದ್ರಸಿಂಗ್, ಚಲುವರಾಜ್, ಶಿವರಾಜ್, ಕುಮಾರ್, ವೆಂಕಟೇಶ, ಶ್ರೀನಿವಾಸ, ಪ್ರಕಾಶ್, ಜಯಚಂದ್ರ, ನಾಗರಾಜ್, ಮಂಜು, ಶಂಬಯ್ಯ, ರಂಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net