ಮಾಗಡಿಯಲ್ಲಿ ಕೆಜಿ ಗಟ್ಟಲೆ ಚಿನ್ನ ದೋಚಿದ ಕಳ್ಳರು

6f1fe7d1-51ae-41e9-b47f-76f7c4576f30-1.jpg
Published on

ಮಾಗಡಿ. ಪಟ್ಟಣದ ರಾಜಕುಮಾರ್ ರಸ್ತೆಯ ಮುಖ್ಯ ರಸ್ತೆಯಲ್ಲಿರುವ ವಾಸವಾಂಬ ಬಟ್ಟೆ ಮಾಲೀಕ ವೇಣುಗೋಪಾಲ್ ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು 5 ಲಕ್ಷ ರೂ ನಗದು ದೋಚಿರುವ ಘಟನೆ ಭಾನುವಾರ ರಾತ್ರಿ  ನಡೆದಿದೆ. 

 ವಾಸವಿ ದೇವಾಲಯದ ಖಜಾಂಚಿಯೂ ಆಗಿರುವ ವೇಣುಗೋಪಾಲ್  ರವರು ಭಾನುವಾರ ಸಂಜೆ 6:30ರ ಸಮಯದಲ್ಲಿ ಆರ್ಯವೈಶ್ಯ ಸಮಾಜದ ಕಾರ್ಯಕ್ರಮಕ್ಕಾಗಿ ಕುಟುಂಬ ಸಮೇತರಾಗಿ ಚನ್ನಪಟ್ಟಣಕ್ಕೆ ತೆರಳಿದ್ದರು. 

ನಂತರ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಿದಾಗ ಕಳ್ಳತವಾಗಿರುವುದು ಗೊತ್ತಾಗಿದೆ. 

ಸ್ಥಳೀಯರು ನೀಡುವ ಮಾಹಿತಿಯಂತೆ  ಭಾನುವಾರ ರಾತ್ರಿ 9:30ರ ಸಮಯದಲ್ಲಿ ಕಳ್ಳರು ಓಡಿ ಹೋಗಿದ್ದಾರೆ. ವಾಸವಿ ದೇವಾಲಯದ ಚಿನ್ನಾಭರಣ ಸೇರಿದಂತೆ ಸುಮಾರು 4 ಕೆಜಿ ಚಿನ್ನಾಭರಣ ದೋಚಲಾಗಿದ್ದು, ಬೆಳ್ಳಿ ಒಡವೆಗಳನ್ನು ಕಳ್ಳರು ಮುಟ್ಟಿಲ್ಲ. 

 ಮಾಲೀಕರು ಮಾಗಡಿ ಪೊಲೀಸರಿಗೆ ವಿಷಯ ಮುಟ್ಟಿಸುತ್ತಿದಂತೆ ಬೆರಳಚ್ಚು ತಜ್ಞರು ನುರಿತ ಶ್ವಾನದಳ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಡಿವೈಎಸ್ಪಿ ಪ್ರವೀಣ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net