ಚಿನ್ನ ಕದ್ದು, ದಾಖಲೆಪತ್ರ ಸುಟ್ಟ ಕಳ್ಳರು

Published on

ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿ ಸತೀಶ್ ಎಂಬುವರ ಮನೆಗೆ ನುಗ್ಗಿದ ಕಳ್ಳರು ಚಿನಾಭರಣ ದೋಚಿ, ಪ್ರಮುಖ ದಾಖಲೆಗಳನ್ನು ಬೆಂಕಿಹಚ್ಚಿ ಸುಟ್ಟು ಹಾಕಿದ ಕುರಿತು ಭಾನುವಾರ ಪೊಲೀಸರಿಗೆ ದೂರು ನಿಡಲಾಗಿದೆ.

ಮನೆ ಮಂದಿ ಸಂಬಂಧಿಕರ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಭಾನುವಾರ ನಸುಕಿನ ವೇಳೆ ಮನೆಯೊಳಗೆ ಬೆಂಕಿ ಉರಿಯುತ್ತಿರುವುದನ್ನು ಕಂಡು ಸತೀಶ್‌ರವರ ಅಣ್ಣನ ಮಗಳು ಪೋನ್ ಮಾಡಿ ತಿಳಿಸಿದ್ದಾರೆ. ಮನೆ ಮಂದಿ ಧಾವಿಸಿ ಬಂದು ನೋಡಿದಾಗ ಬೆಡ್‌ರೂಮ್‌ನಲ್ಲಿ ಬೆಂಕಿ ಉರಿಯುತ್ತಿತ್ತು.

ಹಿಂಬದಿ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಎರಡು ಬಂಗಾರ ಸರ , ಮೂರು ಜೊತೆ ಕಿವಿಯ ಬೆಂಡೋಲೆ, ಸೇರಿದಂತೆ ಸುಮಾರಿ ಒಂದು ಲಕ್ಷ ಮೌಲ್ಯದ ಚಿನಾಭರಣ ಕದ್ದಿರುವುದು ಹಾಗೂ ಭೂಮಿಯ ದಾಖಲೆಗಳು, ಬ್ಯಾಂಖ್ ದಾಖಲೆಗಳು, ಆಧಾರ್ ಕಾರ್ಡ್, ಅಂಗವಿಕಲ ಕಾರ್ಡ್, ಕೋಳಿಫಾರ್ಮ್‌ಗೆ ಸಂಬಂಧಿಸಿದ ದಾಖಲೆಗಳನ್ನು ಇರಿಸಲಾಗಿದ್ದ ಕಪಾಟಿಗೆ ಬೆಂಕಿಹಚ್ಚಿ ಸುಟ್ಟು ಹಾಕಿರುವುದು ಕಂಡು ಬಂದಿರುತ್ತದೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net