ಗೃಹಿಣಿಯ ಚಿನ್ನದ ಸರ ಕಿತ್ತೊಯ್ದ ಕಳ್ಳ

ಗೃಹಿಣಿಯ ಚಿನ್ನದ ಸರ ಕಿತ್ತೊಯ್ದ ಕಳ್ಳ
Published on

ಗುಂಡ್ಲುಪೇಟೆ: ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿರುವ ಪ್ರಕರಣ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ ಗ್ರಾಮದ ಹಂಡೇ ಗೋಪಾಲಸ್ವಾಮಿ ದೇವಾಲಯದ ಸಮೀಪವಿರುವ ಟೈಲರ್ ಗಣೇಶ್ ಎಂಬುವರ ಮನೆಯ ಬಾಗಿಲನ್ನು ಅಪರಿಚಿತ ವ್ಯಕ್ತಿ ಬಡಿದಿದ್ದಾನೆ. ಗಣೇಶ್ ಅವರ ಪತ್ನಿ ಸೌಮ್ಯಾ ಬಾಗಿಲು ತೆರೆದು ನೋಡಿದಾಗ ಅರ್ಧ ಮುಖ ಮುಚ್ಚುವಂತೆ ಸ್ಕಾರ್ಫ್ ಧರಿಸಿದ್ದ ವ್ಯಕ್ತಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಲು ಯತ್ನಿಸಿದ್ದಾನೆ. ಸೌಮ್ಯಾ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಭಾಗ ಕೈಯಲ್ಲೇ ಉಳಿದಿದೆ. ಕಳ್ಳ ಬೈಕ್ ಮೂಲಕ ಪರಾರಿಯಾಗಿದ್ದಾನೆ.

ಘಟನೆಯಿಂದ ಸೌಮ್ಯಾ ಅವರ ಕೈಗೆ ಗಾಯವಾಗಿದ್ದು, ತೆರಕಣಾಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರು. ಸಬ್ ಇನ್ಸ್‌ಪೆಕ್ಟರ್ ಕೆ.ಎಂ.ಮಹೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net