ಕುಡಿಯಲು ನೀರು ಕೇಳಿ ಸರ ಕಳವು

Published on

ಕುದೂರು: ಕುದೂರು ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಕುಡಿಯಲು ನೀರು ಕೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಮಾಂಗಲ್ಯ ಸರವನ್ನು ಕಸಿದುಕೊಂಡು ಹೋಗಿದ್ದಾನೆ.

ಸೋಲೂರು ಹೋಬಳಿಯ ಉಡುಕುಂಟೆ ಗ್ರಾಮದ ಗಿರಿಜಮ್ಮ ಸರ ಕಳೆದುಕೊಂಡವರು.

ಸೋಮವಾರ ಮನೆಯ ಪಕ್ಕದಲ್ಲಿರುವ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನೀರನ್ನು ಕೇಳಿದ್ದಾನೆ. ನಂತರ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದುಕೊಂಡು ಹೋಗಿದ್ದಾನೆ. ಸರ ಕಸಿಯುವಾಗ ಮಹಿಳೆಯು ಪ್ರತಿರೋಧ ವ್ಯಕ್ತಪಡಿಸಿದಾಗ ಕಾಲಿನಿಂದ ಒದ್ದಿದ್ದಾನೆ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net