

ರಾಮನಗರ: ಬಟ್ಟೆ ಅಂಗಡಿ ಬಾಗಿಲು ಹೊಡೆದು 1.45 ಲಕ್ಷ ರೂ. ಮೌಲ್ಯದ ಬಟ್ಟೆ ಹಾಗೂ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿರುವ ಘಟನೆ ನಗರದ ಎಚ್.ಡಿ.ದೇವೇಗೌಡ ಕಾಂಪ್ಲೆಕ್ ನಲ್ಲಿ ನಡೆದಿದೆ.
ತಾಪಂ ವತಿಯಿಂದ ನಿರ್ಮಿಸಿರುವ ಎಚ್.ಡಿ.ದೇವೇಗೌಡ ಕಾಂಪ್ಲೆಕ್ಸ್‌ನಲ್ಲಿ ವಿನಯ್ ಕುಮಾರ್ ಎಂಬವರು ತಾಮರ ಫ್ಯಾಷನ್ಸ್ ಎಂಬ ಬಟ್ಟೆ ಅಂಗಡಿ ತೆರೆದಿದ್ದರು.
ರಾತ್ರಿ ವೇಳೆ ಬಟ್ಟೆ ಅಂಗಡಿ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ಸಿಲ್ಕ್ ಸೀರೆ, ಕುರ್ತಾ ಸೆಟ್, ಡಿವಿಆರ್ ಸೇರಿ ಸುಮಾರು 1.45 ಲಕ್ಷ ರೂ. ಮೌಲ್ಯದ ವಸ್ತು ಕಳವು ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.