ಬಮುಲ್ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ

FotoJet (2)
Published on

ಕಾಂಗ್ರೆಸ್ ಮುಖಂಡ ಮಲವೇಗೌಡ ಸಮರ್ಥನೆ

ಚನ್ನಪಟ್ಟಣ: ಬಮುಲ್ ಚುನಾವಣೆ ಅತ್ಯಂತ ಪಾರದರ್ಶಕವಾಗಿ ನಡೆದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೋಸದಿಂದ ಗೆಲುವು ಸಾಧಿಸಿದ್ದಾರೆ ಎಂಬ ಜೆಡಿಎಸ್ ಪರಾಜಿತ ಅಭ್ಯರ್ಥಿ ಎಚ್.ಸಿ.ಜಯಮುತ್ತು ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಲವೇಗೌಡ ಸ್ಪಷ್ಟಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,17 ಡೇರಿಗಳ ಅನರ್ಹತೆ ವಿಚಾರದಲ್ಲಿ ಜಯಮುತ್ತು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಯಾವುದೇ ಹಸ್ತಕ್ಷೇಪ ನಡೆದಿಲ್ಲ. ಇದನ್ನು ಅವರು ಇಲ್ಲಿಗೆ ಬಿಡದಿದ್ದರೆ, ಮುಂದೆ ಇನ್ನು ಉಗ್ರ ರೀತಿಯಲ್ಲಿ ಖಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್ ಮಾತನಾಡಿ, ಡೇರಿಗಳ ಅನರ್ಹತೆ ವಿಚಾರದಲ್ಲಿ ಸರ್ಕಾರ ಮತ್ತು ನಮ್ಮ ನಾಯಕರ ವಿರುದ್ಧ ಆಪಾದನೆ ಮಾಡುವುದು ಸರಿಯಲ್ಲ. ಜಯಮುತ್ತು ಸುಳ್ಳು ಹೇಳುವ ಬದಲು ಕಾನೂನು ಮೂಲಕ ಹೋರಾಟ ಮಾಡಲಿ ಎಂದರು.

ಕಾಂಗ್ರೆಸ್ ಮುಖಂಡ ಲಾಯರ್ ಹನುಮಂತೇಗೌಡ ಮಾತನಾಡಿ, ತಾಲೂಕಿನಲ್ಲಿ 173 ಡೇರಿ ಇದೆ. ಅದರಲ್ಲಿ 112 ಡೇರಿಗೆ ಮತದಾನ ದೊರೆತಿದ್ದು, 17 ಡೇರಿ ಅನರ್ಹವಾಗಿತ್ತ್ತು. ಉಳಿದ ಡೇರಿಗಳ ಆಡಳಿತ ಮಂಡಳಿ ಸರಿಪಡಿಸಿ ಜಯಮುತ್ತು ಏಕೆ ಮತ ದಕ್ಕಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ರೈತ ಮುಖಂಡ ಸುಜ್ಜೀವನ್ ಕುಮಾರ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net