ಉದ್ಯೋಗದಲ್ಲಿ ಪರಿಪೂರ್ಣತೆ ಇರಬೇಕು; ಧನ್ವಂತರಿ ಗ್ರಾಜುಯೇಷನ್ ದಿನಾಚರಣೆಯಲ್ಲಿ ಮೊಹಮ್ಮದ್ ಪಾಷಾ ಸಲಹೆ

dhanwantari
Published on

ಬೆಂಗಳೂರು : ಪದವಿ ಮುಗಿದ ತಕ್ಷಣ ವಿದ್ಯಾರ್ಥಿಗಳು ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಂಡರೂ ಪರಿಪೂರ್ಣವಾಗಿ ತೊಡಗಿಸಿಕೊಂಡು ನಿರ್ವಹಿಸಿದರೆ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಬೆಂಗಳೂರು ಯೂನಿವರ್ಸಿಟಿ ಶಿಕ್ಷಕರ ಸಂಘದ ಕಾರ್ಯದರ್ಶಿ ಮೊಹಮ್ಮದ್ ಫಾರಕ್ ಪಾಷಾ ಸಲಹೆ ನೀಡಿದ್ದಾರೆ.

ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರದ ಧನ್ವಂತರಿ ಅಕಾಡೆಮಿ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಬಿಸಿಎ, ಬಿಕಾಂ ವಿದ್ಯಾರ್ಥಿಗಳ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಬದುಕನ್ನು ರೂಪಿಸಿಕೊಳ್ಳುವುದು ಅವರ ಕೈಯಲ್ಲಿರುತ್ತದೆ. ಆರಂಭದಲ್ಲಿ ಎಚ್ಚರಿಕೆ ಹೆಜ್ಜೆಗಳನ್ನು ಇಡುತ್ತಾ ಗುರಿಯನ್ನೇ ಬದುಕಾಗಿಸಿಕೊಂಡು ಮುಂದಿನ ಹಾದಿಯನ್ನು ಸುಗಮ ಮಾಡಿಕೊಳ್ಳಬೇಕು. ಸ್ವಲ್ಪ ಎಡವಿದರೂ ಜೀವನದ ಮುಂದಿನ ಹೆಜ್ಜೆ ಕಷ್ಟಕರವಾಗಿರುತ್ತದೆ ಎಂದು ಎಚ್ಚರಿಸಿದರು.

ಹೆಚ್‌ಪಿ ಮುಖ್ಯ ತಂತ್ರಜ್ಞಾನ ಅಧಿಕಾರಿ ರಂಗನಾಥ್ ಸದಾಶಿವ ಮಾತನಾಡಿ, ಕಾಲೇಜು ಜೀವನ ಎಷ್ಟು ಮೋಜು-ಮಸ್ತಿಯಿಂದ ಕೂಡಿರುತ್ತದೆಯೋ ಮುಂದಿನ ಬದುಕು ಅಷ್ಟೇ ಜವಾಬ್ದಾರಿಯುತವಾಗಿರುತ್ತದೆ ಅದನ್ನು ಗಮನದಲ್ಲಿಟ್ಟುಕೊಂಡು ಸಂತೋಷದ ಕ್ಷಣಗಳನ್ನು ಮೆಲುಕು ಹಾಕುತ್ತಾ ನಿಮ್ಮ ಗುರಿ ತಲುಪಬೇಕು ಎಂದು ಕರೆ ನೀಡಿದರು.

ಧನ್ವಂತ್ರಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಜೆ. ಮೊಹಮ್ಮದ್ ಆರಿಫ್, ಮ್ಯಾನೇಜಿಂಗ್ ಟ್ರಸ್ಟಿ ನೀಲ ಮಹಮ್ಮದ್, ಶೈಕ್ಷಣಿಕ ನಿರ್ದೇಶಕ ಪಿ.ಬಿ. ಗಣೇಶ್, ಪ್ರಿನ್ಸಿಪಾಲ್ ಡಾ. ಸಂತೋಷ್, ಉಪ ಪ್ರಿನ್ಸಿಪಾಲ್ ಪ್ರೊ. ಸಿ. ದಿನೇಶ್ ಕುಮಾರ್, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net