ಸರ್ಕಾರಿ ಶಾಲೆಗಳತ್ತ ಹೆಚ್ಚಿರಲಿ ವ್ಯಾಮೋಹ

mudradi-1
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಪಾಲಕರು ಖಾಸಗಿ ವ್ಯಾಮೋಹ ತ್ಯಜಿಸಿ ಸರ್ಕಾರಿ ಶಾಲೆಯತ್ತ ಗಮನಹರಿಸಬೇಕು. ಬಹುತೇಕ ಸಾಧಕರು ಸರ್ಕಾರಿ ಶಾಲೆಯಲ್ಲಿ ಓದಿದವರಾಗಿದ್ದಾರೆ. ಶಾಲೆಯ ಉಳಿವಿಗಾಗಿ ಊರಿನ ಎಲ್ಲ ಜನರು ಸಹಕರಿಸಬೇಕು ಎಂದು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ ಶೆಟ್ಟಿ ಮುನಿಯಾಲು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆ ಮುದ್ರಾಡಿಯಲ್ಲಿ ಶನಿವಾರ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಬ್ರಿ ತಹಸೀಲ್ದಾರ್ ಎಸ್.ಎ ಪ್ರಸಾದ್ ಚಿಣ್ಣರ ಪಾರ್ಕ್ ಉದ್ಘಾಟಿಸಿ ಶುಭಹಾರೈಸಿದರು.

ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ರಾಜ ಪೂಜಾರಿ ಧ್ವಜಾರೋಹಣ ಮಾಡಿದರು. ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಮ್ಯಾ ಕಾಂತಿ, ಇಒ ಶಶಿಧರ್ ಕೆ.ಜೆ, ಬಿಇಒ ಭಾಸ್ಕರ ಟಿ, ಹೆಬ್ರಿ ಎಸ್‌ಬಿಐ ವ್ಯವಸ್ಥಾಪಕ ಶಂಕರ ನಾಯಕ್, ಮುದ್ರಾಡಿ ಯೂನಿಯನ್ ಬ್ಯಾಂಕ್ ಪ್ರಬಂಧಕ ಕಾರ್ತಿಕ್ ನಾಯ್ಕ, ಪಿಡಿಒ ಅಮೃತಾ ಕುಲಾಲ್, ಪ್ರಮುಖರಾದ ಗಣಪತಿ ಎಂ, ರಾಘವೇಂದ್ರ ಆಚಾರ್ಯ, ಮುದ್ದೂರು ಶ್ರೀನಿವಾಸ ಭಂಡಾರಿ, ಲತಾ ಹರಿದಾಸ ಹೆಗ್ಡೆ, ಶ್ರೇಯಸ್, ಸಂತೋಷ್ ಶೆಟ್ಟಿ, ಲೀಲಾವತಿ, ಸದಾಶಿವ ಸೇರ್ವೆಗಾರ್, ಗಣೇಶ್ ಕುಲಾಲ್, ಚಿದಾನಂದ, ರಮಾನಂದ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ರವೀಂದ್ರ ಹೆಗ್ಡೆ, ಸುನೀತಾ, ಸಂಕೇತ್, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಪಾಲಕರಿಂದ ಛದ್ಮವೇಷ ಸ್ಪರ್ಧೆ, ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net