ಮೊಬೈಲ್​ ಬಳಕೆಗೆ ಮಿತಿ ಇರಲಿ

FotoJet
Published on

ವಿದ್ಯಾರ್ಥಿಗಳಿಗೆ ಹೈಕೋರ್ಟ್​ ನ್ಯಾಯಮೂರ್ತಿ ಇ.ಎಸ್​.ಇಂದ್ರೇಶ್​ ಕಿವಿಮಾತು

ಚನ್ನಪಟ್ಟಣ: ನಾವೆಲ್ಲ ತಂತ್ರಾನ ಯುಗದಲ್ಲಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ವಿಚಾರದಲ್ಲಿ ಪ್ರತಿಯೊಬ್ಬರೂ ಲಕ್ಷ$್ಮಣ ರೇಖೆ ಹಾಕಿಕೊಳ್ಳಬೇಕು ಎಂದು ಹೈಕೋರ್ಟ್​ ನ್ಯಾಯಮೂರ್ತಿ, ಬೆಂಗಳೂರು ದಣ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್​.ಇಂದ್ರೇಶ್​ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚನ್ನಪಟ್ಟಣ ತಾಲೂಕು ಕಾನೂನು ಸೇವಾ ಸಮಿತಿ, ಚನ್ನಪಟ್ಟಣ ವಕೀಲರ ಸಂ ಹಾಗೂ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ "ಸಾಮಾಜಿಕ ಜೀವನದ ಮೇಲೆ ಸೈಬರ್​ ಅಪರಾಧಗಳ ಪರಿಣಾಮ ಮತ್ತು ಮುನ್ನೆಚ್ಚರಿಕೆ' ವಿಷಯದ ಕುರಿತ ಕಾನೂನು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಆಸಕ್ತಿ ಕಡಿಮೆಯಾಗಿದೆ. ಪ್ರತಿಯೊಂದನ್ನೂ ಅಂತರ್ಜಾಲದಲ್ಲಿ ಹುಡುಕಿ ಓದಿಕೊಳ್ಳುವ ವ್ಯವಸ್ಥೆ ಹೆಚ್ಚಾಗಿದೆ. ಸರಿ,ತಪ್ಪು ಎಂಬುದನ್ನು ಯೋಚಿಸುವುದಿಲ್ಲ. ಮಕ್ಕಳ ಭವಿಷ್ಯಕ್ಕೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು.

ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಾವು ಒಳ್ಳೆಯದನ್ನೂ, ಕೆಟ್ಟದನ್ನೂ ನೋಡಬಹುದು. ಆದರೆ ನಮ್ಮ ಆಯ್ಕೆ ಮಾತ್ರ ಒಳ್ಳೆಯದ್ದಾಗಿರಬೇಕು. ದೇಶದ ಭವಿಷ್ಯದ ಆಸ್ತಿ ವಿದ್ಯಾರ್ಥಿಗಳು. ದೇಶದ ಅಭಿವೃದ್ಧಿಗೆ ಎಲ್ಲರೂ ಪ್ರಧಾನಮಂತ್ರಿಯೇ ಆಗಬೇಕಿಲ್ಲ, ಪ್ರತಿಯೊಬ್ಬ ಪ್ರಜೆಯೂ ಸಣ್ಣ ಕೊಡುಗೆ ನೀಡುವ ಮೂಲಕವೂ ದೇಶದ ಅಭಿವೃದ್ಧಿಗೆ ಕೈ ಜೋಡಿಸಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯೆ ನ್ಯಾ.ಬಿ.ವಿ.ರೇಣುಕಾ ಮಾತನಾಡಿ, ದೇಶದಲ್ಲಿ ಡಿಜಿಟಲ್​ ಕ್ರಾಂತಿ ಸಂಭವಿಸಿದ ನಂತರ ಮೊಬೈಲ್​ ನಮ್ಮ ಅಂಗೈಯಲ್ಲಿದೆ. ಮೊಬೈಲ್​ ಅನೇಕ ಸೌಲಭ್ಯಗಳ ಜತೆ ಅಪಾಯವನ್ನೂ ತಂದೊಡ್ಡುತ್ತದೆ ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರ್​.ಶ್ರೀನಿವಾಸ್​ಗೌಡ ಮಾತನಾಡಿ, ನಾಗರಿಕರನ್ನು ಡಿಜಿಟಲ್​ ಬಂಧನದಲ್ಲಿರಿಸಿ, ಅವರ ಖಾತೆಗಳಲ್ಲಿದ್ದ ಹಣವನ್ನೆಲ್ಲ ವಂಚಕರು ದೋಚುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ವಕೀಲರ ಸಂದ ಮಾಜಿ ಅಧ್ಯ ಹಾಗೂ ರಾಜ್ಯ ವಕೀಲ ಪರಿಷತ್​ನ ಮಾಜಿ ಅಧ್ಯ ಎಚ್​.ಸಿ.ಶಿವರಾಮು, ಚನ್ನಪಟ್ಟಣ ಅಪರ ಸಿವಿಲ್​ ನ್ಯಾಯಾಧೀಶ ಎಸ್​.ಎನ್​.ಸುರೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net