ಗುಳಗನಹಳ್ಳಿ ಸ್ಮಶಾನಕ್ಕಿಲ್ಲ ರಸ್ತೆ

18 KKP 1 (2)
Published on

* ಶವ ಸಂಸ್ಕಾರಕ್ಕೂ ಎದ್ದುಬಿದ್ದು ತೆರಳುವ ಪರಿಸ್ಥಿತಿ

* ರಸ್ತೆ ದುರಸ್ತಿಗೆ ಅಧಿಕಾರಿಗಳಿಗಿಲ್ಲ ಆಸಕ್ತಿ

ಎಂ.ಎನ್.ಸುರೇಶ್ ಕನಕಪುರ

ತಾಲೂಕಿನ ಏರಂದ್ಯಾಪನಹಳ್ಳಿ ಗ್ರಾಪಂ ವ್ಯಾಪ್ತಿಯ ಗುಳಗನಹಳ್ಳಿ ಸ್ಮಶಾನಕ್ಕೆ ರಸ್ತೆಯಿಲ್ಲದೆ ಶವಸಂಸ್ಕಾರಕ್ಕೂ ಎದ್ದುಬಿದ್ದು ತೆರಳುವಂತಾಗಿದೆ. ಗ್ರಾಮದಲ್ಲಿ ಯಾರೇ ಅಸುನೀಗಿದರೂ ಅಂತ್ಯಕ್ರಿಯೆ ವಾಡಲು ಊರಿನ ಹೊರಗೆ ಸ್ಮಶಾನ ಜಾಗ ಮೀಸಲಿಡಲಾಗುತ್ತದೆ. ಆದರೆ, ಗುಳಗನಹಳ್ಳಿ ಸ್ಮಶಾನ ದೂರವಿದ್ದು, ರೈತರ ಹೊಲ, ಗದ್ದೆ ದಾಟಿ, ಮುಳ್ಳು ಗಿಡ-ಗಂಟಿ ಬಯಲಿಗೆ ಸರಿಸಿ ತೆರಳಬೇಕು.

ಶಾಶ್ವತ ರಸ್ತೆಯಿಲ್ಲ, ಪರ್ಯಾಯ ವಾರ್ಗವೂ ಇಲ್ಲದ ಪರಿಣಾಮ ಸ್ಮಶಾನಕ್ಕೆ ಎದ್ದುಬಿದ್ದು, ಗಾಯಗೊಂಡು ಹೋದವರು ಸಂಸ್ಕಾರದ ಬಳಿಕ ಮನೆಗೆ ಮರಳದೆ ಆಸ್ಪತ್ರೆಗೆ ಹೋಗುವಂತಾಗಿದೆ. ಭಾರಿ ಮಳೆ ಬಿದ್ದಾಗಲಂತೂ ಕಾಲಿಡಲೂ ಸಾಧ್ಯಯವಾಗದಂತೆ ನೀರು ನಿಲ್ಲುತ್ತದೆ, ಕೆಲ ಬಾರಿ ದಾರಿ ಕೆಸರುಗದ್ದೆಯಾಗುತ್ತದೆ.

ಈಗಿನ ಜಾಗ ಸರ್ಕಾರದಲ್ಲ?

ಗ್ರಾಮಕ್ಕೆ ಅಧಿಕೃತವಾಗಿ ಸ್ಮಶಾನದ ಸ್ಥಳವನ್ನು ಸರ್ಕಾರ ಇಲ್ಲಿಯವರೆಗೂ ಮಂಜೂರು ಮಾಡಿಲ್ಲ. ಗ್ರಾಪಂ ವಾಜಿ ಅ‘್ಯಕ್ಷ ರುದ್ರಸ್ವಾಮಿ ಅವರು ಸ್ವಂತ ಜಮೀನಿನ ಪಕ್ಕದಲ್ಲಿ ಜನರ ಅನುಕೂಲಕ್ಕೆಂದು ಸ್ಮಶಾನಕ್ಕೆ ಜಾಗ ಬಿಟ್ಟುಕೊಟ್ಟಿದ್ದು, ಗ್ರಾಮದ ಜನ ಜಾಗದಲ್ಲೇ ಮೃತರ ಅಂತ್ಯಕ್ರಿಯೆ ನಡೆಸುತ್ತಾರೆ.

ಸಾವಿನ ಬಳಿಕವೂ ಇಲ್ಲ ಸೌಲಭ್ಯ

ಸದರಿ ಸ್ಮಶಾನದ ಹಾದಿ ಮ‘್ಯೆ ಒಂದು ಸಣ್ಣ ಹಳ್ಳ ಸಹ ಹರಿಯುತ್ತದೆ. ಸ್ಮಶಾನಕ್ಕೆ ಹೋಗಿ ಬರುವ ಜನ ಸಾವಿನ ನೋವಿನ ನಡುವೆಯೂ, ಎಡವಿ ಬಿದ್ದು, ಹಳ್ಳದಲ್ಲಿ ಜಾರಿ ಬೀಳುತ್ತಿದ್ದಾರೆ. ಬದುಕಿದ್ದಾಗ ಮೂಲಸೌಕರ್ಯಕ್ಕಾಗಿ ಪರಿತಪಿಸಿದಂತೆ ಸಾವಿನ ಬಳಿಕ ಸ್ಮಶಾನ ಸೌಲಭ್ಯವೂ ಸಿಗದಿರುವುದು ದೌರ್ಭಾಗ್ಯವೇ ಸರಿ ಎಂದು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.

ಪ್ರತಿಭಟಿಸುವ ಎಚ್ಚರಿಕೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಸ್ವಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಜಾಗವಿಲ್ಲ, ಜಾಗವಿದ್ದರೂ ಅಲ್ಲಿಗೆ ತೆರಳಲು ದಾರಿಯಿಲ್ಲ. ಆದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು,

ಇನ್ನಾದರೂ ಗುಳಗನಹಳ್ಳಿಗೆ ಸರ್ಕಾರಿ ಸ್ಮಶಾನ ಗುರುತಿಸಿ, ಇಲ್ಲವೆ ಈಗಿರುವ ಸ್ಮಶಾನಕ್ಕೆ ಸೂಕ್ತ ರಸ್ತೆ ನಿರ್ಮಿಸಿ ಎಂದು ಆಗ್ರಹಿಸುತ್ತಿದ್ದಾರೆ. ನಿರ್ಲಕ್ಷಿಸಿದರೆ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.

ಗ್ರಾಪಂ ಮಾಜಿ ಅಧ್ಯಕ್ಷ

ಭೈರವಮೂರ್ತಿ

ಗ್ರಾಮ ಪಂಚಾಯಿತಿಯಿಂದ ನರೇಗಾದಡಿ ಸ್ಮಶಾನಕ್ಕೆ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾದಾಗ ಕೆಲವರು ಅಡ್ಡಿಪಡಿಸಿದ್ದರಿಂದ ವಿಳಂಬವಾಗಿದೆ. ಸ್ಮಶಾನ ದಾರಿಯಲ್ಲಿನ ಜಮೀನುಗಳಿಗೆ ಪರಿಹಾರ ನೀಡಿ ರಸ್ತೆ ವಾಡಿಕೊಡುವ ಭರವಸೆಯನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿದ್ದು, ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.

ಗ್ರಾಮದ ಸ್ಮಶಾನ ಹಾಗೂ ರಸ್ತೆ ಅಭಿವೃದ್ಧಿ ಬಗ್ಗೆ ವಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಗ್ರಾಮಸ್ಥರಿಂದ ಲಿಖಿತ ಮನವಿ ನೀಡಲಾಗಿದೆ. ಅಧಿಕಾರಿಗಳ ತೆ ಚರ್ಚಿಸಿ ಕ್ರಮ ಕೈಗೊಳ್ಳುವ ‘ರವಸೆ ನೀಡಿದ್ದಾರೆ. ಜಯಮ್ಮ, ಗ್ರಾಪಂ ಮಾಜಿ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net