

ಗೋಕಾಕ: ಮಾನವ ಅತಿಯಾದ ವ್ಯಾಮೋಹ&ದುರಾಸೆಗಳಿಗೆ ಬಲಿಯಾಗಿ ಮಾಲ್ಯರಹಿತವಾಗಿ ಬದುಕುತ್ತಿದ್ದಾನೆ. ಸತ್ಯ&ಶುದ್ಧ ಕಾಯಕದ ಮೂಲಕ ಜೀವನ ಸಾಗಿಸಬೇಕು ಎಂದು ಲೋಕಾಪುರದ ಮಹಾಂತ ದೇವರು ಹೇಳಿದರು.
ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ವೇದಿಕೆ, ವಚನ ಸಾಹಿತ್ಯ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 186ನೇ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು.
ಬಸವಣ್ಣನವರು ಕಾಯಕ&ದಾಸೋಹ ಸಮಾನತೆಯ ತತ್ತ$್ವ ಪ್ರತಿಪಾದಿಸಿದರು. ಕಾಯಕಕ್ಕೆ ಸಮನಾದ ಮತ್ತೊಂದು ಶಬ್ದವಿಲ್ಲ. ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುವ ಕೆಲಸ ಕಾಯಕವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಮುರುರಾಜೇಂದ್ರ ಸ್ವಾಮೀಜಿ, 12ನೇ ಶತಮಾನದಲ್ಲಿ ಶಿವಶರಣರು ಕಾಯಕ ಜೀವಿಗಳಾಗಿ ಬದುಕಿ ಮಾದರಿಯಾದವರು ಎಂದರು.
ತಾಲೂಕಿನ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ವರ್ಧೆ ವಿಜೇತರಾದ ದೀಪಾ ಖಡಕಬಾವಿ, ಚಿನ್ಮಯಿ ಶೀಗಿಹಳ್ಳಿ, ರಾಣಿ ಪೋಳ ಅವರಿಗೆ ಬಹುಮಾನ ವಿತರಿಸಲಾಯಿತು.
ಬಸನಗೌಡ ಪಾಟೀಲ, ನೀಲಕಂಠ ತೋಟಗಿರ, ಮಲ್ಲಪ್ಪ ನೇಸರಗಿ, ಪ್ರಸನ್ನ ತಂಬಾಕೆ, ಸೇವಂತಾ ಮಚ್ಚಂಡಿಹಿರೇಮಠ, ಸುಲೋಚನಾ ಮಡ್ಡೇನಿ, ಭಾರತಿ ಮರೆನ್ನವರ ಉಪಸ್ಥಿತರಿದ್ದರು. ಎಸ್.ಕೆ.ಮಠದ ನಿರೂಪಿಸಿ, ವಂದಿಸಿದರು.