

ಕನಕಪುರ: ತಾಲೂಕಿನಲ್ಲಿಯೂ ಸೋಮವಾರ ಜಾತಿ ಜನಗಣತಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಗೊಂದಲದಲ್ಲಿಯೇ ಸಮೀೆ ಆರಂಭಗೊಂಡಿತು.
ನಗರದ ಮುನ್ಸಿಪಲ್ ಹೈಸ್ಕೂಲ್ ಸೇರಿ ಹೋಬಳಿ, ಕೇಂದ್ರಗಳಲ್ಲಿ ಜಾತಿ ಗಣತಿಗೆ 2ನೇ ಹಂತದ ತರಬೇತಿ ಹಾಗೂ ಕಿಟ್ ವಿತರಿಸುವ ಮಾಹಿತಿ ನೀಡಲಾಗಿತ್ತು. ಅದರಂತೆ ಮುನ್ಸಿಪಲ್ ಹೈಸ್ಕೂಲ್ನಲ್ಲಿ 400ಕ್ಕೂ ಹೆಚ್ಚು ಶಿಕ್ಷಕರು, ಕಂದಾಯ ಇಲಾಖೆ ನೌಕರರು, ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಲು, ಕೈಪಿಡಿ, ಕಿಟ್ಗಾಗಿ ಮಧ್ಯಾಹ್ನ 1.30ಕ್ಕೆ ಸ್ಥಳಕ್ಕೆ ಆಗಮಿಸಿದ್ದರು. ಆದರೆ 4ರವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರೂ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಪರದಾಡಿದರು.
3.30ರ ಸುಮಾರಿಗೆ ಬರೀ ತರಬೇತಿ ಕೈಪಿಡಿಯನ್ನು ಕೊಟ್ಟು ಅಧಿಕಾರಿಗಳು ಸುಮ್ಮನಾದರು. ಕಿಟ್ ನೀಡುವಂತೆ ಕೇಳಿದಾಗ ಸೂಪರ್ ವೈಸರ್ಗಳ ಮೂಲಕ ಕೊಟ್ಟುಕೊಳುಹಿಸುತ್ತೇವೆ ಎಂದು ಹಿಂದುಳಿದ ಇಲಾಖೆಯ ಅಧಿಕಾರಿ ಮೀನಾ ತಿಳಿಸಿದರು. ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಳ್ಳದಿರುವುದು, ಸಿಬ್ಬಂದಿಯನ್ನು ಸರಿಯಾಗಿ ನಿಯೋಜಿಸದಿರುವುದು ಗೊಂದಲ ಉಂಟು ಮಾಡಿತ್ತು. ಇನ್ನು ಗಣತಿ ಬಗ್ಗೆ ನೌಕರರಿಗೆ ಸರಿಯಾದ ಮಾಹಿತಿ ಇಲ್ಲದೆ ಜತೆಗೆ ನೀಡಿರುವ ಕೈಪಿಡಿಯಲ್ಲಿಯೂ ಯಾರು? ಎಲ್ಲಿಗೆ ಹೋಗಬೇಕು? , ಏನು ಮಾಡಬೇಕು ? ಎಂಬುದನ್ನೂ ತಿಳಿಸಿಲ್ಲ ಎಂದು ಗಣತಿದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಸಮನ್ವಯದ ಕೊರತೆತಾಲೂಕಿನಲ್ಲಿ ಶೇ.50ರಷ್ಟು ಶಿಕ್ಷಕರ ಕೊರತೆ ಇದೆ. ಈ ಕೊರತೆ ಜಾತಿ ಜನಗಣತಿಗೆಗೂ ಹೊಡೆತ ಕೊಟ್ಟಿದೆ. ಇನ್ನು ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಬಂದಿರುವ ಶಿಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ. ಕಂದಾಯ, ಶಿಕ್ಷಣ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯವರು ಕೆಲಸ ನಿರ್ವಹಿಸುತ್ತಿದ್ದು, ಕಂದಾಯ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆ ತಾಲೂಕಿನ ಜಾತಿ ಗಣತಿಯನ್ನು ಆರಂಭದಲ್ಲೇ ಅವ್ಯವಸ್ಥೆಗೊಳಿಸಿದೆ.> ಹೆಸರು ಹೇಳಲು ಇಚ್ಛಿಸದ ಗಣತಿದಾರ
ತಾಲೂಕಿನಲ್ಲಿ ಜಾತಿ ಜನಗಣತಿಗೆ 1,080 ಸಿಬ್ಬಂದಿ ಅವಶ್ಯಕತೆ ಇದ್ದು, ಇನ್ನೂ 400 ಮಂದಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗೆ ನಗರ ಸೇರಿ ಹೋಬಳಿ ಕೇಂದ್ರಗಳಲ್ಲಿ ಕಿಟ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರಿಕರಗಳು ತಡವಾಗಿ ಬಂದಿದ್ದು, ಶ್ರೀದಲ್ಲೇ ಕಿಟ್ಗಳನ್ನು ಶಿಕ್ಷಕರಿಗೆ ತಲುಪಿಸುವ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. > ಸಂಜಯ್ ತಹಸೀಲ್ದಾರ್ ಕನಕಪುರ