ಕ್ಷಯ ರೋಗಕ್ಕಿದೆ ಪರಿಣಾಮಕಾರಿ ಚಿಕಿತ್ಸೆ

2
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮವನ್ನು ಡಾ.ಶ್ರೀನಿವಾಸ್ ಉದ್ಘಾಟಿಸಿದರು. ಎಂ. ಸುನೀಲ್, ಧನರಾಜ್, ಪ್ರಕಾಶ್ ಇತರರು ಇದ್ದರು.
Published on

ಬೈಲಕುಪ್ಪೆ: ಕ್ಷಯ ರೋಗ ಆತಂಕ ಪಡುವ ಕಾಯಿಲೆ ಅಲ್ಲ. ಇದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಶ್ರೀನಿವಾಸ್ ಸಲಹೆ ನೀಡಿದರು.

ಮೈಸೂರು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷಯ ರೋಗ ಲಕ್ಷಣಗಳು ಕಂಡುಬಂದಾಗ ಭಯಗೊಳ್ಳದೆ ಆರೋಗ್ಯ ಇಲಾಖೆ ಸಹಕಾರ ಪಡೆದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು.

ಶಾನುಭೋಗನಹಳ್ಳಿ ವೈದ್ಯಾಧಿಕಾರಿ ಎಂ. ಸುನೀಲ್ ಅವರು ಕ್ಷಯ ರೋಗ ನಿರ್ಮೂಲನೆಯ ಬಗ್ಗೆ ವಿವರವಾಗಿ ತಿಳಿಸಿದರು. ಚೆನ್ನಕಲ್ ಕವಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಧನರಾಜ್ ಮಾತನಾಡಿ, ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯಾಯ ಗ್ರಾಮಗಳಿಗೆ ಭೇಟಿ ಕೊಟ್ಟು, ಕ್ಷಯ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಡಾ. ದೀಪಕ್, ಲಾಮಾ ಕ್ಯಾಂಪ್‌ನ ಡಾ. ಜಾಯ್ನಿಂಗ್, ಚೆನ್ನಕಲ್ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ಪಿರಿಯಾಪಟ್ಟಣದ ನಿರೀಕ್ಷಣಾಧಿಕಾರಿ ಪ್ರಕಾಶ್, ಲತಾ, ಶಾಂತಕುಮಾರಿ, ಆರೋಗ್ಯ ನಿರೀಕ್ಷಣಾಧಿಕಾರಿ ಮುಜೀಪ್, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆರಾದ ಸಾವಿತ್ರಿ, ರಿಯಾಜ್, ಪಿಡಿಒಗಳಾದ ಬೋರೇಗೌಡ, ಮಂಜುನಾಥ್, ಸತೀಶ್, ಸಿಬ್ಬಂದಿ ಕಾವ್ಯಾ ಅಭಿಲಾಶ್, ಮಹೇಂದ್ರ, ಪ್ರಭಾವತಿ ಆಶಾ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net