ಮನಸ್ಸು ಅರಳಿಸುವ ಸಾಹಿತ್ಯದ ಅಗತ್ಯ ಇದೆ

kota
Published on

ಕೋಟ: ಸುತ್ತಲಿನ ಸಂಸ್ಕೃತಿ ಪ್ರತಿಬಿಂಬಿಸುವ ಹಾಗೂ ಓದುಗನ ಮನಸ್ಸು ಅರಳಿಸುವ ಸಾಹಿತ್ಯ ರಚನೆ ಪ್ರಸ್ತುತ ದಿನಗಳಲ್ಲಿ ಅಗತ್ಯ ಇದೆ. ಈ ದಿಸೆಯಲ್ಲಿ ವಾಣಿಶ್ರೀ ಇವರ ಸಾಹಿತಿಕ ಬದುಕು ಯಶಸ್ಸು ಕಾಣುವಂತ್ತಾಗಲಿ ಎಂದು ಸಾಹಿತಿ ಉಪೇಂದ್ರ ಸೋಮಯಾಜಿ ಹೇಳಿದರು. ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಆವರಣದ ಕೂಟ ಬಂಧು ಭವನದಲ್ಲಿ ಭಾನುವಾರ ನಡೆದ ಬರಹಗಾರ್ತಿ ವಾಣಿಶ್ರೀ ಅಶೋಕ್ ಐತಾಳ ಅವರ ನಾಲ್ಕು ಕಥಾಸಂಕಲನಗಳ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿನಗಾಗಿ ಹೇಳುವೆ ಕಥೆ ನೂರನು, ಗೆಜ್ಜೆ, ಹೆಜ್ಜೆ, ಹಾಗೂ ಹನಿ ಇಬ್ಬನಿ ಕಥಾ ಸಂಕಲನವನ್ನು ಡಾ.ಟಿಎಂಎ ಪೈ ಮಹಾವಿದ್ಯಾಲಯದ ಸಮನ್ವಯಧಿಕಾರಿ ಡಾ.ಮಹಾಬಲೇಶ್ವರ ರಾವ್, ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಗಣೇಶ ಹೆಗಡೆ, ಸುವೃತಾ ಅಡಿಗ, ಸುಮನಾ ಹೇರಳೆ, ಮಂಜುನಾಥ ಮರವಂತೆ ಕಥಾ ಸಂಕಲನಗಳನ್ನು ಪರಿಚಯಿಸಿದರು. ನಿವೃತ್ತ ಉಪನ್ಯಾಸಕ ಪಾರ್ವತಿ ಜಿ. ಐತಾಳ್ ಹಾಗೂ ಸಹ ಶಿಕ್ಷಕ ಸುರೇಶ ಮರಕಾಲ ಶುಭಹಾರೈಸಿದರು. ಪುಸ್ತಕ ರಚನೆಗೆ ಸಹಕರಿಸಿದವರಿಗೆ ಗೌರವಿಸಲಾಯಿತು. ಕುಂದಾಪುರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕೋಟ ಸಿ.ಎ ಬ್ಯಾಂಕ್ ಪ್ರಬಂಧಕ ಅಶೋಕ ಐತಾಳ ಉಪಸ್ಥಿತರಿದ್ದರು. ಕಥೆಗಾರ್ತಿ ವಾಣಿಶ್ರೀ ಅಶೋಕ ಐತಾಳ್ ಪ್ರಾಸ್ತಾವಿಸಿದರು. ಅವನೀಶ ಐತಾಳ್ ಸ್ವಾಗತಿಸಿ, ರಾಜಶ್ರೀ ತಂತ್ರಿ ವಂದಿಸಿದರು. ಸಹಶಿಕ್ಷಕಿ ಅರ್ಪಣಾ ಬಾಯಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net