ಬುದ್ಧಿವಂತಿಕೆ, ಚಾಣಾಕ್ಷತೆಯಿಂದ ಗೆಲುವು ಸಾಧ್ಯ

GAN
Published on

ಕುಂದಾಪುರ: ಕುಸ್ತಿ ಬಹಳ ಹಳೇ ಕಾಲದ ಕ್ರೀಡೆಯಾಗಿದೆ. ದೈಹಿಕವಾಗಿ ಸದೃಢಗೊಳ್ಳಲು ಕ್ರೀಡೆ ಸಹಕಾರಿಯಾಗಿದ್ದು, ಸ್ಪರ್ಧಿಗಳು ಬುದ್ಧಿ, ಚಾಣಕ್ಷತೆ ಮತ್ತು ಶಕ್ತಿ ಉಪಯೋಗಿಸಿ ಕುಸ್ತಿ ಆಡಿ ಜಯಿಸಬೇಕು ಎಂದು ಕುಂದಾಪುರ ರೋಟರಿ ಕ್ಲಬ್ ರಿವರ್‌ಸೈಡ್ ಅಧ್ಯಕ್ಷ ಸದಾನಂದ ಉಡುಪ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್‌ಸೈಡ್ ಮತ್ತು ಇತರ ದಾನಿಗಳ ಸಹಕಾರದಲ್ಲಿ ಇಲ್ಲಿನ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕುಂದಾಪುರ ವಲಯಮಟ್ಟದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾಟ ಉದ್ಘಾಟಿಸಿ ವಾತನಾಡಿದರು.

ಸಂತ ಜೋಸೆಫ್ ಪ್ರೌಢಶಾಲೆ ಜಂಟಿ ಕಾರ್ಯದರ್ಶಿ ಭಗಿನಿ ಸುಪ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂ ಅಧ್ಯಕ್ಷ ಕುಸುವಾಕರ್ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಶುಭ ಕೋರಿದರು.

ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕುಂದಾಪುರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂ ಅಧ್ಯಕ್ಷ ಉದಯ ಮಡಿವಾಳ, ಕುಂದಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಉಮ್ಮೆ ಸಲ್ಮಾ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಮೂಹ ಸಂಪನ್ಮೂಲ ಸಮನ್ವಯ ಅಧಿಕಾರಿ ಅಶೋಕ, ಕುಂದಾಪುರ ಪುರಸಭೆ ಸದಸ್ಯೆ ಶ್ವೇತಾ ಸಂತೋಷ್, ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಪ್ರೇಮಿಕಾ, ಶಿಕ್ಷಕ ರಕ್ಷಕ ಸಂ ಉಪಾಧ್ಯಕ್ಷ ರವಿಚಂದ್ರ, ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ರೊನಾಲ್ಡ್ ಡಿಮೆಲ್ಲೊ, ರಾಜು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಶೋಕ ದೇವಾಡಿಗ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೈಕಲ್ ಪುಟಾರ್ಡೊ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net