ಸಾಧನೆಗೆ ಅಡ್ಡದಾರಿಗಳು ಇಲ್ಲ: ಉಮೇಶ್ ಗಟ್ಟಿ ಅಭಿಪ್ರಾಯ

Ull_Kabaddi
Published on

ಉಳ್ಳಾಲ: ಸಾಧನೆಗೆ ಶ್ರಮವೇ ಮುಖ್ಯ, ಅಲ್ಲಿ ಯಾವುದೇ ಶಾರ್ಟ್ ಕಟ್‌ಗಳಿರುವುದಿಲ್ಲ. ಇಶಾ ಪಟೇಲ್, ಜಯರಾಮ ಶೆಟ್ಟಿ ತರಬೇತಿ ಪಡೆಯುತ್ತಿದ್ದ ಕ್ರೀಡಾಂಗಣಗಳಲ್ಲಿ ನಾವು ಕೂಡ ತರಬೇತಿ ಪಡೆಯುತ್ತಿದ್ದೆವು. ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯಲ್ಲಿ ಒಳ್ಳೆಯ ಮನಸ್ಸುಗಳು ಸಮರ್ಪಣಾ ಭಾವದೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿದ್ದು ಉದಯೋನ್ಮುಖ ಕ್ರೀಡಾಪಟುವನ್ನು ಗುರುತಿಸಿ ಮಾರ್ಗದರ್ಶಿಯಾಗುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಎ.ಉಮೇಶ್ ಗಟ್ಟಿ ಜೆಪ್ಪು ಹೇಳಿದರು.

ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಲಾಗಿದ್ದ ತಿಂಗಳ ಬೆಳಕು- ಗೌರವ ಕಾರ್ಯಕ್ರಮದಲ್ಲಿ ಕಾಪಿಕಾಡು ಉಳ್ಳಾಲದ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಹಾಗೂ ಪ್ರೊ ಕಬಡ್ಡಿಗೆ ಆಯ್ಕೆಗೊಂಡ ಅಕಾಡೆಮಿಯ ಮೂವರು ಸಾಧಕರನ್ನು ಗೌರವಿಸಿ ಮಾತನಾಡಿದರು.

ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಅಧ್ಯಕ್ಷ ಎ.ಜೆ. ಶೇಖರ್, ಎ. ಉಮೇಶ್ ಗಟ್ಟಿ ಜೆಪ್ಪು, ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಸಾಯಿಪ್ರಸಾದ್, ಹಸನ್ ಮೊಹಮ್ಮದ್ ನಿಶಾನ್ ಹಾಗೂ ಯಶರಾಜ್ ಬಗಂಬಿಲ ಅವರನ್ನು ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ವಸಂತ್ ಎನ್. ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಸದಸ್ಯ ಮೋಹನ್ ಕುತ್ತಾರ್, ತಾಲೂಕು ಸಂಘ ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಸದಸ್ಯರಾದ ಆಸೀಫ್, ಗಂಗಾಧರ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ದಿನೇಶ್ ನಾಯಕ್ ಸ್ವಾಗತಿಸಿ. ಕಾರ್ಯದರ್ಶಿ ಡಾ. ಸತೀಶ್ ಕೊಣಾಜೆ ಅತಿಥಿಗಳನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್, ಕಾರ್ಯದರ್ಶಿ ವಜ್ರ ಗುಜರನ್, ಸದಸ್ಯೆ ಸುಷ್ಮಿತಾ ಸಾಮಾಣಿ ಸನ್ಮಾನಿತರ ವಿವರ ಓದಿದರು. ಉಪಾಧ್ಯಕ್ಷ ಆರೀಫ್ ಯು.ಆರ್. ವಂದಿಸಿದರು. ಸತೀಶ್ ಕುಮಾರ್ ಪುಂಡಿಕಾಯಿ ನಿರೂಪಿಸಿದರು.

ತಾಯಿ ಉಮಾಮಹೇಶ್ವರಿ ಹೆಸರಿಗೆ ಕಳಂಕ ಬಾರದಂತೆ ಅಕಾಡೆಮಿ ಸ್ಥಾಪಿಸಲು ಉದ್ಯಮಿ ಎ.ಜೆ. ಶೇಖರ್ ಬೆಂಬಲಿಸಿದ್ದರು. ಅದರಂತೆ 9 ವರ್ಷ ಯಶಸ್ವಿಯಾಗಿ ಪೂರೈಸಿ ತಾಯಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಮಾಡಿದೆ

  • ಗೋಪಿನಾಥ್ ಕಾಪಿಕಾಡ್, ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಸಂಯೋಜಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net