ರಾಯಚೂರಲ್ಲಿ ಮತ್ತೆ ಅಂತಾರಾಜ್ಯ ಕಳ್ಳರ ಹಾವಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

thept raychuru
Published on

ರಾಯಚೂರು: ನಗರದಲ್ಲಿ ಹಾಡುಹಗಲೇ ಒಂದೇ ದಿನ ಮೂರು ಕಡೆ ಸರಣಿ ಮನೆಗಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನೇತಾಜಿ ನಗರದ ಗಾಜಗರಪೇಟೆ, ನಗರೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಒಟ್ಟು ಮೂರು ಮನೆಗಳಲ್ಲಿ ಕಳ್ಳತನವಾಗಿದೆ. ಈ ಹಿಂದೆ ಸಿಂಧನೂರು ಪಟ್ಟಣದಲ್ಲೂ ಇದೇ ಮಾದರಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿತ್ತು. ಹಾಗಾಗಿ ಇದು ಅಂತಾರಾಜ್ಯ ಕಳ್ಳರ ಕೃತ್ಯ ಎಂದು ಶಂಕಿಸಲಾಗಿದೆ.

ಒಂದೇ ತಂಡದಿಂದ ಕಳ್ಳತನ ನಡೆದಿದೆ ಎನ್ನಲಾಗಿದ್ದು, 100 ಗ್ರಾಂ ಚಿನ್ನಾಭರಣ ಸೇರಿದಂತೆ ಲಕ್ಷಕ್ಕೂ ಅಧಿಕ ಹಣ ಕಳ್ಳತನವಾಗಿದೆ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್​ ಮಾಡಿರುವ ಕಳ್ಳರು ವಸ್ತು ಮಾರಾಟ ಮಾಡೋ ಸೋಗಿನಲ್ಲಿ ಏರಿಯಾಗಳಲ್ಲಿ ತಿರುಗಾಡಿ ಬಳಿಕ ಬೀಗ ಹಾಕಿರೊ ಮನೆಗಳನ್ನು ಪತ್ತೆ ಮಾಡಿ ಮದ್ಯಾಹ್ನದ ವೇಳೆ ಕೃತ್ಯ ನಡೆಸಿದ್ದಾರೆ.

ಸದ್ಯ ನೇತಾಜಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net