ಲಕ್ಷಾಂತರ ಮೌಲ್ಯದ ಸಾಮಗ್ರಿ ಕಳವು

crime
Published on

ಮಾಗಡಿ: ತಾಲೂಕಿನ ಬೆಳಗುಂಬ ಗ್ರಾಪಂ ಕಚೇರಿಯ ಕಿಟಕಿಯ ಕಬ್ಬಿಣ ಮುರಿದು ಕಳ್ಳತನ ಮಾಡಲಾಗಿದೆ.

ಕೊಳವೆಬಾವಿಯ ಮೋಟಾರ್​, 25 ನೀರಿನ ಪೈಪ್​, 4 ಯುಪಿಎಸ್​ ಬ್ಯಾಟರಿ, ಸಿಸಿ ಕ್ಯಾಮರಾ, ಡಿವಿಆರ್​, 200 ಎಲ್​ಇಡಿ ಬಲ್ಬ್​ ಸೇರಿ ಸುಮಾರು 2,50 ಲ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಪಿಡಿಒ ಸತೀಶ್​ ಮಾಗಡಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. 3 ದಿನದಿಂದ ಎರಡನೇ ಬಾರಿ ಕಳ್ಳತನವಾಗಿದ್ದು, ಈ ಹಿಂದೆ ಡಿವಿಆರ್​ ಬಿಟ್ಟು ಈ ಎಲ್ಲ ವಸ್ತುಗಳನ್ನು ಕಳ್ಳತನ ಮಾಡಿದ್ದರು.

ಜತೆಗೆ ಬೆಳಗುಂಬ ಗ್ರಾಮದ ಪಟ್ಲದಮ್ಮ, ಬಸವಣ್ಣ ದೇವಾಲಯ ಒಡೆದು ಹುಂಡಿ ಹಾಗೂ ಒಡವೆ ಕಳವು ಮಾಡಲಾಗಿದೆ. ಜತೆಗೆ ಗ್ರಾಮದ ರಾಜಣ್ಣ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net