

ಹಾನಗಲ್ಲ: ದೇವಸ್ಥಾನದ ಕೀಲಿ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಚಿಕ್ಕಾಂಶಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಚಿಕ್ಕಾಂಶಿ ಗ್ರಾಮದ ಚೌಡೇಶ್ವರಿದೇವಿ ದೇವಸ್ಥಾನದ ಕೀಲಿ ಮುರಿದು ನಗ-ನಾಣ್ಯ ದೋಚಲಾಗಿದೆ. ದೇವಸ್ಥಾನದಲ್ಲಿ ಕಟ್ಟಲಾಗಿದ್ದ ಹತ್ತಕ್ಕೂ ಹೆಚ್ಚು ಗಂಟೆಗಳು, ಒಂದು ವರ್ಷದಿಂದ ಸಂಗ್ರಹವಾಗಿದ್ದ, ಹತ್ತು ಸಾವಿರಕ್ಕೂ ಅಧಿಕ ಹಣವಿದ್ದ ಕಾಣಿಕೆ ಪೆಟ್ಟಿಗೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ದೇವಸ್ಥಾನದ ಅರ್ಚಕರು ಊರಲ್ಲಿಲ್ಲದ ಸಂದರ್ಭ ನೋಡಿ ಕೃತ್ಯ ಎಸಗಲಾಗಿದೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.